ರಾಯಚೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದನ್ನೇ ಹೇಳಿಕೊಂಡು ಓಡಾಡುತ್ತಾರೆ. ಅದಕ್ಕೆಲ್ಲ ಉತ್ತರ ಕೊಡುತ್ತಾ ಹೋದರೆ ನಮಗೆ ಬೆಲೆ ಇರುವುದಿಲ್ಲ ಎಂದು ರಾಯಚೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಚ್.ಡಿ ಕೆಯವರ ಪೆನ್ ಡ್ರೈವ್ ಬಾಂಬ್ ಬಗ್ಗೆ ಲೇವಡಿ ಮಾಡಿ, ಕುಮಾರಸ್ವಾಮಿ ಪ್ರತಿದಿನ ಆರೋಪ ಮಾಡಿಕೊಂಡೆ ಓಡಾಡುತ್ತಾರೆ. ಬಿಡಿಎ ಮತ್ತು ನೈಸ್ ಹಗರಣದಲ್ಲಿ ಪ್ರಧಾನಿಗೆ ಎಚ್.ಡಿ.ಕೆ.ಪತ್ರ ಬರೆದಿದ್ದಾರಲ್ಲ ಅದರ ದಾಖಲೆ ಕೊಡಲಿ. ತನಿಖೆಯಾಗಲಿ ಏನಾಗುತ್ತದೆ ನೋಡೊಣ.
ಯಾಕೆ ಮುಗಿಬಿದ್ದು, ಮುಗಿಬಿದ್ದು, ಪ್ರತಿಪಕ್ಷಗಳಿಗೆ ಮಂತ್ರಿಗಳು ಯಾಕೆ ಉತ್ತರ ಕೊಡಬೇಕು ಅಂತ ಯಾರೋ ಅಂದ್ರು, ಅದಕ್ಕೆ ನಾವು ಯಾಕೆ ಉತ್ತರ ಕೊಡಬೇಕು? ಜನಗಳೇ ಉತ್ತರ ಕೊಡ್ತಾರೆ.ಅವರ ಪೆನ್ ಡ್ರೈವ್ ಬಗ್ಗೆ ನಾನು ಆನ್ಸರ್ ಮಾಡಲ್ಲ.ಹೇಳಿದ್ದನ್ನೇ ಹೇಳ್ಕೊಂಡ್ ಹೋಗ್ತಾರೆ..ಪ್ರತಿದಿನ ಆರೋಪ ಮಾಡ್ತಾರೆ, ಅದಕ್ಕೆ ನಾವು ಪ್ರತಿದಿನ ಉತ್ತರ ಕೊಡ್ತಾ ಹೋದ್ರೆ ಬೆಲೆನೇ ಇರಲ್ಲ..ಡೈಲಿ ಅದರ ಬಗ್ಗೆನೇ ಮಾತಾಡಿದ್ರೆ ಬೆಲೆ ಇರುತ್ತಾ.?ಅವರು ಏನ್ ಕೊಡ್ತಾರೆ ಕೊಡಲಿ, ತನಿಖೆ ನಡೆಯಲಿ ಎಂದರು.
ನಮ್ಮಲ್ಲಿ ಯಾವುದೇ ಶಾಸಕರ ಮದ್ಯೆ ಅಸಮಾಧಾನ ಇಲ್ಲ. ಹೊಸ ಸರ್ಕಾರ ಬಂದಾಗ ಹೊಸ ಶಾಸಕರು ಆಯ್ಕೆಯಾಗಿರುತ್ತಾರೆ. ಜನರ ಅಪೇಕ್ಷೆಗಳು ಇರುತ್ತವೆ. ಹೀಗಾಗಿ ಮುಖ್ಯಮಂತ್ರಿ ಶಾಸಕರ ಸಭೆ ನಡೆಸುತ್ತಿದ್ದಾರೆ ಎಂದರು.ಕುಡಿಯುವ ನೀರಿಗಾಗಿ ಕಳೆದ ಸರ್ಕಾರದ ಅವಧಿಯಲ್ಲಿ 92,000 ಕೋಟಿ ಹಣ ಮೀಸಲು ವಿಚಾರವಾಗಿ ಮಾತನಾಡಿ ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು.ಯಾಕಂದ್ರೆ 92 ಸಾವಿರ ಕೋಟಿ ಅಲ್ವಾ..?
ಫೈನಾನ್ಸ್ ಮಿನಿಸ್ಟರ್ ಸರ್ಕಾರದಲ್ಲಿ ಅವರೇ ಅಲ್ಲವಾ, ಅದನ್ನ ಮುಖ್ಯಮಂತ್ರಿಗಳನ್ನೇ ಕೇಳಬೇಕು ಎಂದರು.