Monday, December 2, 2024
Google search engine

Homeಆರೋಗ್ಯಹೆಚ್.ಡಿ. ಕೋಟೆ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಡಿಯಲ್ಲಿ ಈಟ್ ರೈಟ್ ಇಂಡಿಯಾ ತರಬೇತಿ...

ಹೆಚ್.ಡಿ. ಕೋಟೆ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಡಿಯಲ್ಲಿ ಈಟ್ ರೈಟ್ ಇಂಡಿಯಾ ತರಬೇತಿ ಕಾರ್ಯಕ್ರಮ

ವರದಿ: ಎಡತೊರೆ ಮಹೇಶ್

ಹೆಚ್.ಡಿ.ಕೋಟೆ: ಹೆಚ್.ಡಿ.ಕೋಟೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಆಹಾರ ಸುರಕ್ಷಿತ ಕಚೇರಿ ಮೈಸೂರು, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ,ಹೆಚ್.ಡಿ. ಕೋಟೆ ವತಿಯಿಂದ ಆಹಾರ ಸುರಕ್ಷಿತ ಕಾಯ್ದೆ ಅಡಿಯಲ್ಲಿ ಹೆಚ್. ಡಿ.ಕೋಟೆ /ಸರಗೂರು ತಾಲ್ಲೂಕಿನ ವಸತಿ ನಿಲಯಗಳ ,ನಿಲಯ ಪಾಲಕರಿಗೆ, ಮುಖ್ಯ ಅಡಿಗೆಯವರಿಗೆ, ಹಾಗೂ ಅಡುಗೆ ಸಹಾಯಕರಿಗೆ , ಮಕ್ಕಳಿಗೆ ನೀಡುವ ಆಹಾರ ತಯಾರಿಕೆ ಮತ್ತು ಸ್ವಚ್ಚತೆ ಬಗ್ಗೆ ಕಾರ್ಯಗಾರ ಹಮ್ಮಿ ಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ, ತಹಶೀಲ್ದಾರ್ ಶ್ರೀನಿವಾಸ್ ರವರು ಅಧ್ಯಕ್ಷತೆ ವಹಿಸಿ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ತಾಲ್ಲೂಕು ಆಹಾರ ಸುರಕ್ಷಿತ ಅಧಿಕಾರಿಗಳಾದ ಡಾ| ಟಿ.ರವಿಕುಮಾರ್ ರವರು ಸಮಾಜ ಕಲ್ಯಾಣ ಇಲಾಖೆ, ಸಹ ನಿರ್ದೇಶಕರಾದ ರಾಮ ಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಶ್ರೀಮತಿ ಶಶಿಕಲಾ, ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ಜನಾಂಗದ ಇಲಾಖೆಯ ವ್ಯವಸ್ಥಾಪಕರಾದ ನಾಗರಾಜು ಉಪಸ್ಥಿತರಿದ್ದರು.

ತಹಶೀಲ್ದಾರ್ ರವರು ಮಾತನಾಡಿ , ನಾನು ಕೆಲವು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ್ದೇನೆ, ಎಲ್ಲರೂ ಆಹಾರ ಪರವಾನಗಿಯನ್ನೂ ಮಾಡಿಸಿಕೊಳ್ಳಿ, ಮಕ್ಕಳಿಗೆ ಉತ್ತಮವಾದ ಆಹಾರವನ್ನು ನೀಡಿ, ಸ್ವಚ್ಛತೆಯನ್ನು ಕಾಪಾಡಿ ಎಂದು ತಿಳಿಸಿದರು.

ನಂತರ ಆಹಾರ ಸುರಕ್ಷತಾಧಿಕಾರಿ ಸುಮಂತ್ ರವರು ಮಾತನಾಡಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ನುಡಿದರು.

ಆಹಾರ ಸುರಕ್ಷತಾಧಿಕಾರಿಗಳಾದ ಸಂದೀಪ್ ರವರು ಮಾತನಾಡಿ, ಹಿಟ್ ರೈಟ್ ಕ್ಯಾಂಪಸ್ ಎನ್ನುವುದು ಕಾಲೇಜುಗಳು ವಿಶ್ವವಿದ್ಯಾನಿಲಯಗಳು ವಸತಿ ನಿಲಯಗಳು ಕೆಲಸದ ಸ್ಥಳಗಳು ಮತ್ತು ಆಸ್ಪತ್ರೆಗಳಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸುವ ಕ್ಯಾಂಪಸ್ ಗಳಿಗೆ ಪ್ರಮಾಣಪತ್ರಗಳನ್ನು ಮತ್ತು ಪ್ರಶಸ್ತಿಗಳನ್ನು ನೀಡುವ ಉಪಕ್ರಮವಾಗಿದೆ ಈ ಆಂದೋಲನವು ವಿದ್ಯಾರ್ಥಿಗಳು ಉದ್ಯೋಗಿಗಳು ಮತ್ತು ಸಾರ್ವಜನಿಕರಿಗೆ ಸರಿಯಾದ ಆಹಾರ ಆಯ್ಕೆಗಳನ್ನು ಮಾಡಲು ಸುಲಭ ಪೂರಕ ವಾತಾವರಣವನ್ನು ಸೃಷ್ಟಿಸುತ್ತದೆ. ಶಾಲೆ ಮಕ್ಕಳುಗಳಲ್ಲಿ ಪಾಠ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ಸರಿಯಾದ ಆಹಾರ ಪದ್ಧತಿಯನ್ನು ಬೆಳೆಸಲು ಮತ್ತು ಸುರಕ್ಷಿತ ಆರೋಗ್ಯಕರ ಮತ್ತು ಪರಿಸರ ಯೋಗ್ಯ ಆಹಾರ ಕುರಿತು ಸಂದೇಶಗಳನ್ನು ತಲುಪಿಸಲು ಮತ್ತು ಬಲಪಡಿಸಲು ಆರೋಗ್ಯ ಮತ್ತು ಕ್ಷೇಮ ತಂಡಗಳನ್ನು ರಚಿಸಲು ರಾಷ್ಟ್ರ ವ್ಯಾಪ್ತಿ ಕಾರ್ಯಕ್ರಮವಾಗಿದೆ ಆದರದ ಮೇಲೆ ಶಿಫಾರಸ್ಸು ಮಾಡಲಾದ ಅಭ್ಯಾಸಗಳನ್ನು ಅನುಸರಿಸುವ ಶಾಲೆಗಳಿಗೆ ಈ ರೈಟ್ ಸ್ಕೂಲ್ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದರು.

ತಾಲ್ಲೂಕು ಆಹಾರ ಸುರಕ್ಷತಾಧಿಕಾರಿಗಳಾದ ಮತ್ತು ಆರೋಗ್ಯಾಧಿಕಾರಿಗಳಾದ ಡಾ| ರವಿಕುಮಾರ್ ಮಾತನಾಡಿ, ಮೊದಲಿಗೆ ನಿಲಯದ ಪಾಲಕರು ಮತ್ತು ಮುಖ್ಯ ಅಡಿಗೆಯವರು ಹಾಗೂ ಮಕ್ಕಳಿಗೆ ಆರೋಗ್ಯ ತಪಾಸಣೆಯನ್ನು ಮಾಡಿಸಬೇಕು, ಹಾಗೂ ವಸತಿ ನಿಲಯದಲ್ಲಿರುವ ಅಡಿಗೆಮನೆ, ಮಕ್ಕಳು ಮಲಗುವ ಕೊಠಡಿಗಳು, ಆಹಾರ ಮತ್ತು ತರಕಾರಿ ಸಂಗ್ರಹಿಸುವ ಉಗ್ರಾಣ ಹಾಗೂ ವಸತಿ ನಿಲಯದ ಒಳಗೆ ಮತ್ತು ಹೊರಗೆ, ದಿನಕ್ಕೆ ಎರಡು ಬಾರಿಯಾದರೂ ಸ್ವಚ್ಛತೆ ಮಾಡಬೇಕು, ಕುಡಿಯುವ ನೀರಿನ ಟ್ಯಾಂಕನ್ನು ತಿಂಗಳಿಗೆ ಎರಡು ಬಾರಿ ಸ್ವಚ್ಛಗೊಳಿಸಿ, ಕ್ಲೋರಿ ನೇಷನ್ ಮಾಡಬೇಕು , ಹಾಗೂ ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸಬೇಕು , ಮತ್ತು ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು , ಮಕ್ಕಳಿಗೆ ಶುದ್ಧವಾದ ಆಹಾರ ನೀಡಬೇಕು, ತರಕಾರಿಗಳನ್ನು ಚೆನ್ನಾಗಿ ತೊಳೆದು ಅಡುಗೆ ಮಾಡಬೇಕು, ಮಕ್ಕಳಿಗೆ ಕುಡಿಯಲು ಬಿಸಿ ನೀರು ಕೊಡಬೇಕು, ಹಾಗೂ ಮಕ್ಕಳು ಮಲಗುವ ಕೊಠಡಿಯ ಕಿಟಕಿಗಳಿಗೆ ಸೊಳ್ಳೆ ಪರದೆ ಹಾಗೂ ಮೆಸ್ ಗಳನ್ನು ಅಳವಡಿಸಬೇಕು, ಸ್ವಚ್ಛತೆಯಂದಿದ್ದರೆ ರೋಗಗಳು ಬರಲು ಸಾಧ್ಯವಿಲ್ಲ ಆದ್ದರಿಂದ ಸ್ವಚ್ಛತೆ ಕಡೆ ಹೆಚ್ಚು ಗಮನ ನೀಡಲು ತಿಳಿಸಿದರು.ಆರ್ .ಬಿ .ಎಸ್ .ಕೆ, ವೈದ್ಯಾಧಿಕಾರಿಗಳು ಮತ್ತು ತಂಡದವರಿಂದ ವಸತಿ ನಿಲಯದ ಮಕ್ಕಳಿಗೆ ಆರೋಗ್ಯ ತಪಾಸಣೆಯನ್ನು ಮಾಡಲು ಕ್ರಿಯಾ ಯೋಜನೆಯನ್ನು ಮಾಡುತ್ತಿದ್ದೇವೆ , ಹಾಗೂ ನಮ್ಮ ಸಿಬ್ಬಂದಿ ವರ್ಗದವರು ವಸತಿ ನಿಲಯಗಳಿಗೆ ಭೇಟಿ ನೀಡಿದಾಗ ಅವರಿಗೆ ಸಹಕರಿಸಿ ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡಿಸಬೇಕೆಂದು ಸಂದರ್ಭದಲ್ಲಿ ತಿಳಿಸಿದರು.

ಆಹಾರ ಸುರಕ್ಷತಾಧಿಕಾರಿಗಳಾದ ಮಂಜು ರವರು ಮಾತನಾಡಿ ವಸತಿ ನಿಲಯಗಳಲ್ಲಿ ನಿರ್ವಹಿಸಬೇಕಾದ ದಾಖಲಾತಿಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.

ಈ ಸಂದರ್ಭದಲ್ಲಿಆಹಾರ ಸುರಕ್ಷತಾ ಧಿಕಾರಿಗಳಾದ ಬಾಲಸುಬ್ರಮಣ್ಯ ಕಿಶೋರ್, ಮಂಜು ,ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾಗೇಂದ್ರ, ರವಿರಾಜ್, ನಿಲಯ ಪಾಲಕರು, ಮುಖ್ಯ ಅಡಿಗೆಯವರು, ಅಡಿಗೆ ಸಹಾಯಕರು, ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular