Tuesday, April 15, 2025
Google search engine

Homeರಾಜ್ಯಸುದ್ದಿಜಾಲಎಚ್.ಡಿ.ಕೋಟೆ: ಮೀನಾಕ್ಷಿ ಮತ್ತು ಮಹಾದೇವು ಅವರ ಕುಟುಂಬಕ್ಕೆ ಬಹಿಷ್ಕಾರ ಹಾಕಿಲ್ಲ: ಗ್ರಾ. ಪಂ ಉಪಾಧ್ಯಕ್ಷ ಎಡತೊರೆ...

ಎಚ್.ಡಿ.ಕೋಟೆ: ಮೀನಾಕ್ಷಿ ಮತ್ತು ಮಹಾದೇವು ಅವರ ಕುಟುಂಬಕ್ಕೆ ಬಹಿಷ್ಕಾರ ಹಾಕಿಲ್ಲ: ಗ್ರಾ. ಪಂ ಉಪಾಧ್ಯಕ್ಷ ಎಡತೊರೆ ಮಹೇಶ್

ವರದಿ: ಎಡತೊರೆ ಮಹೇಶ್

ಎಚ್.ಡಿ.ಕೋಟೆ: ಗ್ರಾಮದಲ್ಲಿ ಮೀನಾಕ್ಷಿ ಮತ್ತು ಮಹಾದೇವು ಅವರ ಕುಟುಂಬಕ್ಕೆ ಬಹಿಷ್ಕಾರ ಹಾಕಿಲ್ಲ ಎಂದು ಅಣ್ಣೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಡತೊರೆ ಮಹೇಶ್ ತಮಟೆ ಬಾರಿಸಿಕೊಂಡು ಸಾರಿಕೆ ಹಾಕಿದ ಪ್ರಸಂಗ ತಾಲೂಕಿನ ಎಡತೊರೆ ಪಾಳ್ಯದಲ್ಲಿ ಶುಕ್ರವಾರ ನಡೆಯಿತು.

ಗ್ರಾಮದಲ್ಲಿ ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ ಎಂದು ಕಳೆದ ಮೂರು ತಿಂಗಳ ಹಿಂದೆ ನ್ಯಾಯಲಯಕ್ಕೆ ದೂರು ನೀಡಿದ್ದರು. ದೂರನ್ನು ಸ್ವೀಕರಿಸಿದ ನ್ಯಾಯಾಲಯವು ಗ್ರಾಮಸ್ಥರಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ನಡೆಸಿದಾಗ ಗ್ರಾಮಸ್ಥರು ಮೀನಾಕ್ಷಿ ಮಹಾದೇವು ಅವರಿಗೆ ನಾವು ಬಹಿಷ್ಕಾರ ಹಾಕಿಲ್ಲ ಎಂದು ಹೇಳಿಕೆ ನೀಡಿದ್ದರು, ಈ ಬಗ್ಗೆ ಗ್ರಾಮದಲ್ಲಿ ಬಹಿರಂಗವಾಗಿ ಪ್ರಚಾರ ಮಾಡಿ ನ್ಯಾಯಾಲಯಕ್ಕೆ ಸಾಕ್ಷಿ ನೀಡುವಂತೆ ತಿಳಿಸಿದ ಹಿನ್ನೆಲೆಯಲ್ಲಿ, ಶುಕ್ರವಾರ ಗ್ರಾಮದಲ್ಲಿ ಗ್ರಾಮಸ್ಥರು ಸಭೆ ಸೇರಿ ತಮಟೆ ಹೊಡೆದು ಪ್ರಚಾರ ಮಾಡಲು ತೀರ್ಮಾನಕ್ಕೆ ಬಂದ ನಂತರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಡತೊರೆ ಮಹೇಶ್ ತಾವೇ ತಮಟೆ ಹೊಡೆದು ಮೀನಾಕ್ಷಿ ಮಹಾದೇವು ಅವರಿಗೆ ಗ್ರಾಮದಲ್ಲಿ ಬಹಿಷ್ಕಾರ ಹಾಕಿಲ್ಲ ಎಂದು ಕೂಗಿದರು ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ವಿಡಿಯೋ ಚಿತ್ರೀಕರಣ ಮಾಡಿಸಿದರು.

ಏ.೧೯ ನ್ಯಾಯಾಲಯದಲ್ಲಿ ವಿಚಾರಣೆ ಇದ್ದು ಆ ದಿನ ಪ್ರಕರಣ ಅಂತ್ಯ ಆಗಲಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಇದೇ ಸಂದರ್ಭದಲ್ಲಿ ವಾಸಬೋವಿ, ಮಹಾದೇವು, ಕೃಷ್ಣ, ಸೋಮಣ್ಣ, ಶಿವಪ್ಪ, ಕೂಸಪ್ಪ, ಸಿದ್ದರಾಜು, ಲಕ್ಷ್ಮಮ್ಮ , ಚಿಕ್ಕಮ್ಮ, ತಾಯಮ್ಮ,ತಮ್ಮಯ್ಯ ಬೋವಿ, ಪೂಜಾರಿ ಬೋವಿ ಇದ್ದರು.

ಕೆ.ಎಡತೊರೆಪಾಳ್ಯ ನನ್ನ ವರ್ಡಿಗೆ ಸೇರಿದ್ದು ಅಲ್ಲಿ ಹಿಂದೆ ಮೀನಾಕ್ಷಿ ಕುಟುಂಬದವರು ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ ಎಂಬುದಾಗಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ದೂರಿನ ಅನ್ವಯ ನ್ಯಾಯಾಲಯವು ಬಹಿಷ್ಕರ ಹಾಕಿಲ್ಲ ಎಂಬುದಾಗಿ ನೀವು ಊರಿನಲ್ಲಿ ಪಂಚಾಯಿತಿ ಮಾಡಿ ಅವರನ್ನು ಕೂರಿಸಿಕೊಂಡು ಚಿತ್ರ ಫೋಟೋ ಚಿತ್ರಕರಿಸಿ ನ್ಯಾಯಾಲಯಕ್ಕೆ ಸಾಕ್ಷಿ ನೀಡುವಂತೆ ಆದೇಶಿಸಿದೆ. ಹಿನ್ನೆಲೆಯಲ್ಲಿ ಪಾಳ್ಯದಲ್ಲಿ ಗ್ರಾಮಸ್ಥರು ಗ್ರಾಮದ ಯಜಮಾನರು ಮತ್ತು ಸಾರ್ವಜನಿಕರು ನಾನು ಎಲ್ಲರೂ ಸೇರಿ ಪಂಚಾಯಿತಿ ಮಾಡಿದವು ಅದರ ಅನ್ವಯ ಯಾವುದೇ ಬಹಿಷ್ಕಾರ ಹಾಕಿಲ್ಲ ಎಂಬುದಾಗಿ ಗ್ರಾಮದ ದಿಂದ ತಿಳಿದುಬಂದ ನಂತರ ನ್ಯಾಯಕ್ಕೆ ಅದನ್ನು ನೀಡಲಾಯಿತು. ಅಲ್ಲಿ ದೂರುದಾರರು ಹೇಳಿಕೆ ನೀಡುವಾಗ ಉಲ್ಟಾ ಹೊಡೆದರು ಯಾವುದೋ ಜಮೀನಿನಲ್ಲಿ ಕುಂತು ನ್ಯಾಯ ಮಾಡಿದ್ದಾರೆ ಸ್ವಾಮಿ ಎಂಬ ಹೇಳಿಕೆಯನ್ನು ನೀಡಿದರು. ಇದರಿಂದ ನ್ಯಾಯಾಲಯವು ಪುನಃ ಸಭೆ ಸೇರಿ ಟಮಟೆ ಬಾರಿಸಿ ಊರಿನಲ್ಲಿ ಎಲ್ಲರಿಂದಲೂ ಬಹಿಷ್ಕಾರ ಹಾಕಿಲ್ಲ ಎಂಬುದರ ಹೇಳಿಕೆಯನ್ನು ಚಿತ್ರಕರಿಸಿ ಕೋರ್ಟಿಗೆ ನೀಡುವಂತೆ ತಿಳಿಸಿದರು. ಇದನ್ನು ಗ್ರಾಮಸ್ಥರು ನನ್ನ ಗಮನಕ್ಕೆ ತಂದರು. ಆಗ ನಾನೇ ತಮಟೆ ಬಾರಿಸುವವರು ಯಾರು ಇಲ್ಲದ ಕಾರಣ ಒಬ್ಬ ವಾರ್ಡಿನ ಜನಪ್ರತಿನಿಧಿಯಾಗಿ ಗ್ರಾಮದ ಹಿತವನ್ನು ಕಾಪಾಡುವ ಜವಾಬ್ದಾರಿ ನನ್ನದಾಗಿದ್ದ ಕಾರಣ ನಾನೇ ಸ್ವತಃ ನಿಂತು ತಮಟೆ ಬಾರಿಸಿದ್ದೇನೆ ನನಗೆ ಮತ ಹಾಕಿ ಗೆಲ್ಲಿಸಿರುವ ನನ್ನ ಗ್ರಾಮಕ್ಕೆ ಯಾವುದೇ ಅನ್ಯಾಯ ಆಗಲು ನಾನು ಬಿಡುವುದಿಲ್ಲ ಗ್ರಾಮದ ಹಿತ ಕಾಪಡುವುದೇ ನನ್ನ ಜವಾಬ್ದಾರಿ.
ಎಡತೊರೆ ಮಹೇಶ್
ಉಪಾಧ್ಯಕ್ಷ
ಅಣ್ಣೂರು ಗ್ರಾಮ ಪಂಚಾಯಿತಿ

RELATED ARTICLES
- Advertisment -
Google search engine

Most Popular