ವರದಿ: ಎಡತೊರೆ ಮಹೇಶ್
ಹೆಚ್.ಡಿ.ಕೋಟೆ: ತಾಲ್ಲೂಕು ಕಾನೂನು ಸೇವಾ ಸಮಿತಿ ಹೆಚ್.ಡಿ.ಕೋಟೆ ಮತ್ತು ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ ಹೆಚ್ .ಡಿ.ಕೋಟೆ. ಇವರ ವತಿಯಿಂದ ,ವಿಶ್ವ ಭಾರತಿ ಪ್ರಥಮ ದರ್ಜೆ ಕಾಲೇಜು ಹೆಚ್.ಡಿ.ಕೋಟೆ ಆರೋಗ್ಯ ಇಲಾಖೆ ಇವರ ಸಹಯೋಗದೊಂದಿಗೆ, ವಿಶ್ವ ಭಾರತಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ವಿಶ್ವ ಭೂ ದಿನಾಚರಣೆ ಮತ್ತು ಮಾದಕ ವ್ಯಸನದ ಬಲುಪಶುಗಳಿಗೆ ಕಾನೂನು ಸೇವೆಗಳು ಮತ್ತು ಮಾದಕ ವ್ಯಸದ ನಿರ್ಮೂಲನ ಕುರಿತು ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಆದ ಶ್ರೀ ಸಂದೇಶ್ ಪ್ರಭು,.ಸಿವಿಲ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಗಳಾದ . ಸುರೇಶ್ ಎಸ್ .ಎನ್. ಹಾಗೂ 2ನೇ ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಸುಷ್ಮಾ ಎಂ,ವಕೀಲರ ಅಧ್ಯಕ್ಷರಾದ ಗಂಗರಾಜು, ಮಣಿ ರಾಜು,ಹಿರಿಯ ವಕೀಲರಾದ ಶ್ರಿ ಸಂಗಮೇಶ್ವರ ರವರು ಹಾಗೂ ಡಾಕ್ಟರ್ ರವಿಕುಮಾರ್ ರವರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು.
ನಂತರ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಆದ ಶ್ರೀ ಸಂದೇಶ್ ಪ್ರಭು ರವರು ಮಾತನಾಡಿ ನಮ್ಮ ಶಕ್ತಿ ನಮ್ಮ ಗ್ರಹ ಎಂಬ ಘೋಷವಾಕ್ಯವಿರುವ ವಿಶ್ವ ಭೂ ದಿನದ ಅಂಗವಾಗಿ ಮತ್ತು ಮಾನ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ಕ್ರಿಯೆ ಯೋಜನೆಯಡಿಯಲ್ಲಿ ಮಾದಕ ವ್ಯಸನದ ಬಲಿಪಶುಗಳಿಗೆ ಕಾನೂನು ಸೇವೆಗಳು ಮತ್ತು ಮಾದಕ ವ್ಯಸನದ ಬಗ್ಗೆ ತಿಳಿಸಿದರು.
ಯುವಕರು ಮತ್ತು ಯುವ ಜನತೆ ನಮ್ಮನ್ನು ನಮ್ಮ ದೇಶವನ್ನು ಮುಂದುವರಿಸಿಕೊಂಡು ಹೋಗಬೇಕು ಅವರೇ ನಶೆಯಲ್ಲಿ ತೇಲಾಡುವಂತಾಗಿದೆ ಮತ್ತು ಯುವಕರು ಮುಂದಿನ ಜೀವನವನ್ನು ವೃದ್ಧಿಸಿಕೊಳ್ಳಬೇಕೆಂದು ಆದರೆ ಅಂಗಡಿಗಳಲ್ಲಿ ಚಾಕ್ಲೇಟ್ ಅನ್ನು ಖರೀದಿ ಖರೀದಿಸಿಕೊಳ್ಳುವ ಹಾಗೆ ಮಾದಕ ವಸ್ತುಗಳು ಸುಲಭವಾಗಿ ಸಿಗುತ್ತಿದೆ ಆದ್ದರಿಂದ ಇದರಿಂದ ದೂರವಿರಬೇಕೆಂದು ಮತ್ತೆ ನಿಮ್ಮ ಮುಂದಿನ ಜೀವನವನ್ನು ಹಾಳಾಗದಂತೆ
ನೋಡಿಕೊಳ್ಳಬೇಕು ಎಂದು ತಿಳಿಸಿದರು.
ನಂತರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಗಳಾದ ಸುರೇಶ್ ಎಸ್ ಎನ್ ರವರು ಭೂಮಿ ಸಂರಕ್ಷಣೆ ಮತ್ತು ಭೂ ರಕ್ಷಣೆ ಬಗ್ಗೆ , ಹಾಗೂ ಪ್ರತಿದಿನವೂ ಕೂಡ ಭೂಮಿಯನ್ನು ರಕ್ಷಿಸುವ ಜೊತೆಗೆ ನಮ್ಮ ಶಕ್ತಿ ನಮ್ಮ ಗ್ರಹ ಎಂಬ ಘೋಷ ವಾಕ್ಯದ ಜೊತೆಗೆ ಭೂಮಿಯನ್ನು ರಕ್ಷಿಸಬೇಕು ಹಾಗೂ ಎನ್‌ಡಿಪಿಎಸ್ ಆಕ್ಟ್ 1985ರ ಬಗ್ಗೆ ಕುರಿತು ಈಗಿನ ಯುವಕರ ನ್ನು ಕುರಿತು ಕಾನೂನು ಅರಿವು ಮೂಡಿಸಿದರು.
ನಂತರ 2ನೇ ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಸುಷ್ಮಾ ರವರು ಮಾತನಾಡಿ ಮಧ್ಯ ವ್ಯಾಸನದಿಂದ ಮಕ್ಕಳು ಹಾಳಾಗಬೇಡಿ, ನಿಮಗಾಗಿ ತಂದೆ ತಾಯಿಯರು ತುಂಬಾ ಕಷ್ಟ ಪಡುತ್ತಾರೆ, ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಚೆನ್ನಾಗಿ ಓದಿ ಎಲ್ಲರೂ ಮುಂದೆ ಬರಬೇಕು ಎಂದು ತಿಳಿಸಿದರು.
22 ಬೋಜಿನ ಆಚರಣೆ ಮಾಡುತ್ತೀವಿ ಮತ್ತು ಭೂಮಿಯನ್ನು ಹೇಗೆ ಸಂರಕ್ಷಣೆ ಮಾಡಿಕೊಳ್ಳಬೇಕು , ಭೂಮಿಯನ್ನು ಹೇಗೆ ನಾವು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು ಮತ್ತು ಮಾದಕವೆಸನದ ಬಗ್ಗೆ ಕುರಿತು ಈಗಿನ ಮಕ್ಕಳಿಗೆ ಮತ್ತು ಪೋಷಕರು ಮಕ್ಕಳನ್ನು ಹೇಗೆ ರಕ್ಷಣೆ ಮಾಡಬೇಕು ಮಕ್ಕಳು ಇದರಿಂದ ಹೇಗೆ ದೂರವಿರಬೇಕು ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ ರವಿಕುಮಾರ್ ರವರು ಮಾತನಾಡಿ, ಮಾದಕ ವಸ್ತುಗಳ ಸೇವನೆ ದಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಹಾಗೂ ಇವಾಗಿನ ಯುವ ಪೀಳಿಗೆಯು,ಶಿಕ್ಷಣದಿಂದ ಹೊರಹುಳಿದು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದು,ಹಾಗೂ ಆತ್ಮಹತ್ಯೆ ಮತ್ತು ಅಪರಾಧ ಎಸಕುವಲ್ಲಿ ಯುವ ಪೀಳಿಗೆಯು ತೊಡಗಿಸಿಕೊಳ್ಳುತ್ತಿರುವುದು ಸಮಾಜಕ್ಕೆ ಮಾರಕವಾಗಿದೆ ಎಂದು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ಯಾನಲ್ ವಕೀಲರಾದ ಮಣಿ ರಾಜು ರವರು ಮಾತನಾಡಿ ಮಾದಕವಸ್ತುಗಳು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ ಕಾನೂನಿನಲ್ಲಿರುವ ಆಕ್ಟ್ ಗಳ ಬಗ್ಗೆ ತಿಳಿಸಿದರು.
ಹಿರಿಯ ವಕೀಲರಾದ ಸಂಗಮೇಶ್ವರ ರವರು ಮಾತನಾಡಿ ಭೂಮಿಯ ಮಹತ್ವ ಮತ್ತು ರಕ್ಷಣೆ ಬಗ್ಗೆ ತಿಳಿಸಿದರು.
ವಕೀಲ ಸಂಘದ ಅಧ್ಯಕ್ಷರಾದ ಗಂಗರಾಜುರವರು ಮಾತನಾಡಿ ಭೂ ರಕ್ಷಣೆ ಮತ್ತು ಮಾದಕ ವಸ್ತುಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಬಗ್ಗೆ ತಿಳಿಸಿದರು.
ಈ ಕಾರ್ಯ ಕ್ರಮದಲ್ಲಿ ವಿಶ್ವ ಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕುಮಾರ್ ಸ್ವಾಮಿ, ಕಾಲೇಜಿನ ಪ್ರಾಧ್ಯಾಪಕರು, ನ್ಯಾಯಾಲಯದ ಸಿಬ್ಬಂದಿ ವರ್ಗದವರು ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು, ಪೊಲೀಸರು ಕಾಲೇಜಿನ ವಿದ್ಯಾರ್ಥಿಗಳು ಇನ್ನಿತರರು ಹಾಜರಿದ್ದರು.