ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹೆಚ್.ಎಲ್.ಕಾಂತರಾಜು ಅವಿರೋಧವಾಗಿ ಆಯ್ಕೆಯಾದರು. ಈವರೆಗೆ ಅಧ್ಯಕ್ಷರಾಗಿದ್ದ ಆಶಾ ಅವರ ರಾಜೀನಾಮೆಯಿಂದ ತೆರನಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೆಚ್.ಎಲ್.ಕಾಂತರಾಜು ಅವರನ್ನು ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರೆ ಸುಮಿತ ಆಯ್ಕೆ ಪ್ರಕಟಿಸಿದರು.
ಚುನಾವಣಾ ಸಭೆಯಲ್ಲಿ ಉಪಾಧ್ಯಕ್ಷ ನಾಗೇಶ್, ಸದಸ್ಯರಾದ ಮಂಜುಳ, ಯೋಗೇಶ್ವರಿ, ಭವ್ಯ, ಪಾರ್ವತಿ, ವೆಂಕಟರಾಮು, ಹೆಚ್.ಎಸ್.ಜಲೇಂದ್ರ, ಭಾಗ್ಯ, ಪುಷ್ಪಲತಾ, ಹೆಚ್.ಎಸ್.ರವಿ, ಶೈಲಜ, ಹೆಚ್.ಡಿ.ಮನುಗೌಡ,
ನವೀನ್‌ಕುಮಾರ್, ಪಿಡಿಒ ಕೆ.ಪಿ.ಸರಿತಾ, ಕಾರ್ಯದರ್ಶಿ ವೆಂಕಟೇಶ್ ಇದ್ದರು.
ಅಧ್ಯಕ್ಷರ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಜಯಕಾರದ ಘೋಷಣೆ ಮೊಳಗಿಸಿ ಸಂಭ್ರಮಿಸಿದರು.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಿ.ದಾಮೋದರ, ಜೆಡಿಎಸ್ ಮುಖಂಡರಾದ ಸತೀಶ್‌ಬಾಬು, ಉದಯಕುಮಾರ್, ದೀಪಕ್, ಪುಟ್ಟೇಗೌಡ, ದಿನೇಶ್ ಮತ್ತಿತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.