ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಹಳಿಯೂರು ಗ್ರಾಮದ ರೇಖಾ ಮತ್ತು ವಕೀಲ ಹೆಚ್.ಆರ್.ಮಂಜುನಾಥ್ ಅವರ ಪುತ್ರಿ ಎಚ್.ಎಮ್.ಭೂಷಿತ ರವರು ಮೈಸೂರಿನಲ್ಲಿ ಎಸ್.ಎಸ್.ಪ್ರೊಡಕ್ಷನ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಪ್ರತಿಭೆ ಹಾಗೂ ಸೌಂದರ್ಯ ವೇದಿಕೆ ” ಕಿಂಗ್ ಅಂಡ್ ಕ್ವೀನ್ ಇಂಡಿಯಾ 2025″ ಕಾರ್ಯಕ್ರಮದಲ್ಲಿ ಭಾಗವಹಿಸಿ ” ಮಿಸ್ ಟ್ವಿನ್ ಕ್ವೀನ್” ವಿಭಾಗದಲ್ಲಿ ಮಿಸ್ ಟೀನ್ ಕ್ವೀನ್ ಸೂಪರ್ ಮಾಡೆಲ್, ಮಿಸ್ ಟೀನ್ ಕ್ವೀನ್ ಸ್ಟೈಲ್ ಐಕಾನ್, ಮಿಸ್ ಟೀನ್ ಕ್ವೀನ್ ಫೋಟೋಜೆನಿಕ್ ಹಾಗೂ ಮಿಸ್ ಟೀನ್ ಕ್ವೀನ್ 2025 ಮೊದಲ ರನ್ನರ್ ಅಪ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಎಸ್ ಎಸ್ ಪ್ರೊಡಕ್ಷನ್ ಸಂಸ್ಥಾಪಕ ಎಸ್.ಸೋಮಶೇಖರ್, ಆರ್ಟ್ ಬ್ಯಾಟಲ್ ನ ನೀಲ್ ನಿತಿನ್, ಅಭಿನವ ಇವೆಂಟ್ಸ್ ನ ಭಾಸ್ಕರ, ಕಿರುತೆರೆ ನಟ ಅಥರ್ವ ಸೇರಿದಂತೆ ಹಲವು ಗಣ್ಯರುಗಳು ಹೆಚ್.ಎಂ.ಭೂಷಿತ ಅವರಿಗೆ ಕಿರೀಟ ಧಾರಣೆ ಮಾಡಿ ಅಭಿನಂದಿಸಿದರು.