Friday, April 18, 2025
Google search engine

Homeಸ್ಥಳೀಯಹಡಪದ ಅಪ್ಪಣ್ಣ ಅತ್ಯುತ್ತಮ ವಚನಕಾರ

ಹಡಪದ ಅಪ್ಪಣ್ಣ ಅತ್ಯುತ್ತಮ ವಚನಕಾರ

ಗುಂಡ್ಲುಪೇಟೆ: 12ನೇ ಶತಮಾನದಲ್ಲಿ ಹಡಪದ ಅಪ್ಪಣ್ಣ ಹಾಗೂ ಧರ್ಮಪತ್ನಿ ಲಿಂಗಮ್ಮ ಅತ್ಯುತ್ತಮ ವಚನಕಾರರಾಗಿದ್ದರು ಎಂದು ತಹಸೀಲ್ದಾರ್ ಶ್ರೀಶೈಲ ಯಮನಪ್ಪ ತಳವಾರ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಡಪದ ಅಪ್ಪಣ್ಣ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು. ಜೊತೆಗೆ ಸಮಾಜ ಸುಧಾರಣೆಗೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಕಾರಣ ಅವರನ್ನು 12ನೇ ಶತಮಾನದಲ್ಲೂ ಸ್ಮರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಹಡಪದ ಅಪ್ಪಣ್ಣ ಒಬ್ಬ ಕಾಯಕ ಯೋಗಿ. ಈ ಕಾರಣದಿಂದ ಅವರ ಮೇಲೆ ಬಸವಣ್ಣ ಹೆಚ್ಚಿನ ನಂಬಿಕೆ ಇಟ್ಟಿದ್ದರು. ಕೊನೆ ಕ್ಷಣದವರೆಗೂ ತಮ್ಮ ಕರ್ತವ್ಯವನ್ನು ಬಸವಣ್ಣನವರಿಗೆ ಮುಡಿಪಾಗಿಟ್ಟಿದ್ದರು. ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿರುವ ಹಡಪದ ಅಪ್ಪಣ್ಣ ಆದರ್ಶಗಳನ್ನು ಪಾಲಿಸಿ, ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು. ಜೊತೆಗೆ ಸಮಾಜದಲ್ಲಿರುವ ಭಿನ್ನಾಭಿಪ್ರಾಯ. ಜಾತಿ, ಮತ, ಪಂಥಗಳನ್ನು ಧಿಕ್ಕರಿಸಿ ಸಾಮಾಜಿಕ ಪಿಡುಗುಗಳನ್ನು ದೂರ ಮಾಡುವ ಮೂಲಕ ಒಳ್ಳೆಯ ಜೀವನ ನಡೆಸೋಣ ಎಂದು ಸಲಹೆ ನೀಡಿದರು.

ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಜಿ.ಎಸ್.ಕೃಷ್ಣ ಮಾತನಾಡಿ, ಹಡಪದ ಅಪ್ಪಣ್ಣ ಜಯಂತಿಯನ್ನು ತಾಲೂಕು ಆಡಳಿತ ವತಿಯಿಂದ ಇಂದು ಸರಳವಾಗಿ ಆಚರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಅದ್ದೂರಿಯಿಂದ ನಡೆಸಲಾಗುವುದು. ಇದಕ್ಕೆ ತಾಲೂಕು ಆಡಳಿತ ಹಾಗೂ ಅಧಿಕಾರಿಗಳು ಸಹಕಾರ ನೀಡಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ಮಹದೇವಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಿ.ಜಿ.ಚಂದ್ರಶೇಖರ್, ಸವಿತಾ ಸಮಾಜದ ಹಂಗಳ ಹೋಬಳಿ ಅಧ್ಯಕ್ಷ ಎಚ್.ಕೆ.ಸಿದ್ದಪ್ಪ, ಬೇಗೂರು ಹೋಬಳಿ ಅಧ್ಯಕ್ಷ ಸುರೇಶ, ತೆರಕಣಾಂಬಿ ಹೋಬಳಿ ಅಧ್ಯಕ್ಷ ಅಂಕಪ್ಪ, ಹಿಂದುಳಿದ ವರ್ಗದ ಜಿಲ್ಲಾ ಕಾರ್ಯದರ್ಶಿ ರಾಜು.ಎಸ್, ಮುಖಂಡರಾದ ಬಲಚವಾಡಿ ಸಿದ್ದಪ್ಪ ಸೇರಿದಂತೆ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್, ಸರ್ವೇ ಇಲಾಖೆಯ ರಮೇಶ್ ನಾಯಕ, ಶಿರಸ್ತೇದಾರ್ ಮಹೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸವಿತಾ ಸಮಾಜದ ಮುಖಂಡರು ಹಾಜರಿದ್ದರು.

RELATED ARTICLES
- Advertisment -
Google search engine

Most Popular