Saturday, April 19, 2025
Google search engine

Homeರಾಜ್ಯಅನಾರೋಗ್ಯದಿಂದ ಬಳಲುತ್ತಿದ್ದ ಬಿಎಂಟಿಸಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ, ಬಸ್ ನ್ನು ಸ್ವತಃ ಚಲಾಯಿಸುವ ಮೂಲಕ ಮಾನವೀಯತೆ...

ಅನಾರೋಗ್ಯದಿಂದ ಬಳಲುತ್ತಿದ್ದ ಬಿಎಂಟಿಸಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ, ಬಸ್ ನ್ನು ಸ್ವತಃ ಚಲಾಯಿಸುವ ಮೂಲಕ ಮಾನವೀಯತೆ ಮೆರೆದ ಹಲಸೂರು ಎಸಿಪಿ ರಾಮಚಂದ್ರ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಬಿಎಂಟಿಸಿ ಚಾಲಕನನ್ನು ಆಂಬ್ಯುಲೆನ್ಸ್​ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಿಸಿ, ರಸ್ತೆಯಲ್ಲಿ ನಿಂತಿದ್ದ ಬಿಎಂಟಿಸಿ ಬಸ್​ ಅನ್ನು ಸ್ವತಃ ಚಲಾಯಿಸುವ ಮೂಲಕ ಹಲಸೂರು ಎಸಿಪಿ ರಾಮಚಂದ್ರ ಅವರು ಕರ್ತವ್ಯ ಪ್ರಜ್ಞೆಯ ಜೊತೆ ಮಾನವೀಯತೆಯನ್ನು ಸಹಾ ಮೆರೆದಿದ್ದಾರೆ.

ಶಿವಾಜಿನಗರ-ಕಾಡುಗೋಡಿ‌ ಮಾರ್ಗದ ಬಿಎಂಟಿಸಿ ಬಸ್ ಚಾಲಕನಿಗೆ ಮಾರ್ಗ ಮಧ್ಯ ಅನಾರೋಗ್ಯದಿಂದ ಬಳಲಿದರು. ಹೀಗಾಗಿ ಚಾಲಕ ಓಲ್ಡ್ ಏರ್ಪೋರ್ಟ್ ರಸ್ತೆಯ ಕಮಾಂಡ್ ಆಸ್ಪತ್ರೆ ಬಳಿ ಬಸ್​ ನಿಲ್ಲಿಸಿದ.

ನಗರಕ್ಕೆ ವಿವಿಐಪಿಗಳ ಆಗಮನ ಹಿನ್ನಲೆ ಓಲ್ಡ್ ಏರ್ಪೋರ್ಟ್​ ರಸ್ತೆಯಲ್ಲಿ ಎಸಿಪಿ ರಾಮಚಂದ್ರ ಅವರು ಭದ್ರತೆಗೆ ನಿಯೋಜನೆಗೊಂಡಿದ್ದರು. ಈ ವೇಳೆ ರಸ್ತೆ ಮಧ್ಯ ನಿಂತಿದ್ದ ಬಿಎಂಟಿಸಿ ಬಸ್​ ಅನ್ನು ಸುಮಾರು ಒಂದು ಕಿ.ಮೀ ದೂರದ ಬಸ್​ ನಿಲ್ದಾಣದವರೆಗೆ ಸ್ವತಃ ಚಾಲನೆ ಮಾಡಿದ್ದಾರೆ.

ಇದಕ್ಕೂ ಮುನ್ನ‌ ಬಸ್​ ಚಾಲಕನನ್ನು ಆಂಬ್ಯುಲೆನ್ಸ್​ ಮೂಲಕ ಬೌರಿಂಗ್ ಆಸ್ಪತ್ರೆಗೆ ಎಸಿಪಿ ರಾಮಚಂದ್ರ ಅವರು ರವಾನಿಸಿಲು ವ್ಯವಸ್ಥೆ. ಎಸಿಪಿ, ಬಸ್​ ಚಾಲನೆ ಮಾಡಿರುವ ‌ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ‌ ವೈರಲ್​ ಆಗುತ್ತಿದ್ದು, ಪ್ರಯಾಣಿಕರು ಮತ್ತು ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

RELATED ARTICLES
- Advertisment -
Google search engine

Most Popular