ಮಂಡ್ಯ: ಕೆರಗೋಡು ಗ್ರಾಮದ ಹನುಮ ಧ್ವಜ ವಿವಾದ ಹಿನ್ನೆಲೆ ಮಂಡ್ಯದಲ್ಲಿ ಹನುಮ ಧ್ವಜ ಅಭಿಯಾನ ಮುಂದುವರೆದಿದೆ.
ಕೆರಗೋಡು ಬಳಿಕ ಮಂಡ್ಯದ ಶಂಕರನಗರದಲ್ಲಿ ಮನೆಗಳಿಗೆ ಬಿಜೆಪಿಯಿಂದ ಧ್ವಜ ವಿತರಣೆ ಅಭಿಯಾನ ಆರಂಭವಾಗಿದೆ.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳ, ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಹನಮ ಧ್ವಜ ಹಿಡಿದು ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಬಳಿಕ ಮನೆ ಮನೆಗೆ ಹನುಮ ಧ್ವಜ ಕಟ್ಟಿ ಜೈ ಶ್ರೀರಾಮ್, ಜೈ ಹನುಮ, ಹನುಮನ ಪಾದದ ಮೇಲಾಣೆ ಧ್ವಜವನ್ನಲ್ಲೇ ಕಟ್ಟುವೆವು ಎಂದು ಘೋಷಣೆ ಕೂಗಿದರು.
ಮೊನ್ನೆಯಷ್ಟೇ ಕೆರಗೋಡು ಗ್ರಾಮದಲ್ಲಿ ಧ್ವಜ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಮಂಡ್ಯ ಜಿಲ್ಲಾಧ್ಯಂತ ಮನೆಗಳಿಗೆ ಹನುಮ ಧ್ವಜ ವಿತರಣೆಗೆ ಬಿಜೆಪಿ ನಿರ್ಧರಿಸಿ ಆ ಮೂಲಕ ಭಾವನಾತ್ಮಕವಾಗಿ ಮತದಾರರನ್ನ ಓಲೈಕೆಗೆ ಬಿಜೆಪಿ ತಂತ್ರ ಹೆಣೆದಿದೆ.