ಮಂಡ್ಯ: ಹನುಮ ಧ್ವಜ ವಿವಾದ ಪ್ರಕರಣ ಸಂಬಂಧಿಸಿದಂತೆ ಕೆರಗೋಡು ಗ್ರಾಮಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದ ರಾಜ್ಯ ಬಿಜೆಪಿ ನಿಯೋಗ ಭೇಟಿ ನೀಡಿದೆ.
ಸ್ಥಳದಲ್ಲಿ ಬಿಗಿವಿನ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು. ಬಿಜೆಪಿ ನಾಯಕರು ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ನಿಯೋಗದಲ್ಲಿ ಅಶ್ವಥ್ ನಾರಾಯಣ್, ಸೇರಿದಂತೆ ಜೆಡಿಎಸ್ ನಾಕರು ಸಾಥ್ ನೀಡಿದರು.
ಸ್ಥಳಕ್ಕೆ ಆರ್.ಅಶೋಕ್ ಆಗಮಿಸುತ್ತಿದ್ದಂತೆ ಕಾರ್ಯಕರ್ತರ ದಂಡು ಅಶೋಕ್ ಸುತ್ತುವರೆದಿದ್ದು, ಅಶೋಕ್ ಮುಂದೆ ಸರ್ಕಾರ, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು. ಅಶೋಕ್ ಮುಂದೆ ಜೈಶ್ರೀರಾಮ್, ಜೈ ಹನುಮಾನ್ ಘೋಷಣೆ ಮೊಳಗಿತು.
ಆರ್.ಅಶೋಕ್ ಗೆ ಜೆಡಿಎಸ್, ಬಿಜೆಪಿ ನಾಯಕರು ಸಾಥ್ ನೀಡಿದರು.