Wednesday, April 9, 2025
Google search engine

Homeರಾಜ್ಯಸುದ್ದಿಜಾಲಹನೂರು: ಮನೆಯ ಗೇಟ್ ಮುರಿದು, ದ್ವಿಚಕ್ರ ವಾಹನಕ್ಕೆ ಹಾನಿ ಮಾಡಿದ ಕಾಡಾನೆ

ಹನೂರು: ಮನೆಯ ಗೇಟ್ ಮುರಿದು, ದ್ವಿಚಕ್ರ ವಾಹನಕ್ಕೆ ಹಾನಿ ಮಾಡಿದ ಕಾಡಾನೆ

ಹನೂರು: ತಾಲೂಕಿನ ಮರೂರು ಗ್ರಾಮದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು,  ತಡರಾತ್ರಿ ಮನೆಯೊಂದರ ಗೇಟ್ ಮುರಿದು ದ್ವಿಚಕ್ರ ವಾಹನಕ್ಕೆ ಹಾನಿ ಮಾಡಿರುವ ಘಟನೆ ಜರುಗಿದೆ.

ತಾಲೂಕಿನ ಕಾಡಂಚಿನ ಗ್ರಾಮ ಪೊನ್ನಾಚಿ ಸಮೀಪದ ಮರೂರು ಗ್ರಾಮದಲ್ಲಿ ಕಾಡಾನೆಯೊಂದು ನಿರಂತರವಾಗಿ ಬರುತ್ತಿದ್ದು ರಾತ್ರಿ ಆಗುತ್ತಲೆ ಗ್ರಾಮಸ್ಥರು ಹೊರ ಬರಲು ಭಯಪಡುವಂತಾಗಿದೆ. ಈ ಮಧ್ಯೆ ಕಳೆದ ರಾತ್ರಿ ಕಾಡಾನೆ ನಾಗಣ್ಣ ಎಂಬುವವರ ಮನೆ ಬಳಿ ಬಂದು ಮನೆಯ ಗೇಟ್ ಮತ್ತು ದ್ವಿ ಚಕ್ರ ವಾಹನಕ್ಕೆ ಹಾನಿ ಮಾಡಿದೆ.

ಕಾಡಾನೆ ನಿರಂತರವಾಗಿ ಗ್ರಾಮಕ್ಕೆ ಬರುತ್ತಿದ್ದು ಹಲವಾರು ಆವಾಂತರ ಸೃಷ್ಟಿಸಿದೆ. ಈ ಬಗ್ಗೆ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಈ ಆನೆಯಿಂದ ಹೆಚ್ಚಿನ ಅನಾಹುತ ಉಂಟಾಗಿ ಪ್ರಾಣ ಹಾನಿ ಸಂಭವಿಸುವ ಮುನ್ನ ಆನೆ ಸ್ಥಳಾಂತರಕ್ಕೆ ಕ್ರಮ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular