ಹನೂರು: ಪರವಾನಗಿ ಇಲ್ಲದೆ ಬಂದೂಕನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ಘಟನೆ ಹನೂರು ಪಟ್ಟಣದ ಆರ್ ಎಸ್ ದೂಡ್ಡಿ ಸಮೀಪದ ಜಮೀನೋಂದರಲ್ಲಿ ನಡೆದಿದೆ.
ಆರ್ ಎಸ್ ದೂಡ್ಡಿಯ ಸಿದ್ದಶೆಟ್ಟಿ ಹಾಗೂ ಬಸವರಾಜು ಎಂಬಾತರೇ ಬಂಧಿತ ಆರೋಪಿ.
ಹನೂರಿನ ಆರ್ ಎಸ್ ದೂಡ್ಡಿ ಸಮೀಪದ ಜಮೀನೊಂದರಲ್ಲಿ ನಾಡ ಬಂದೂಕುನ್ನು ಸಂಗ್ರಹಿಸಲಾಗಿದೆ ಎಂಬ ಖಚಿತ . ಖಚಿತ ಮಾಹಿತಿ ಹಿನ್ನೆಲೆ ಹನೂರು ಪೋಲಿಸ್ ಇನ್ಸಪೇಕ್ಟರ್ ಶಶಿಕುಮಾರ್ ನೇತ್ರತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಒಂದು ನಾಡ ಬಂದೂಕು ಸಿಕ್ಕಿದ್ದು ಸೇರಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಎಎಸ್ ಎ ಮಂಜುನಾಥ್ ಪೊಲೀಸರಾದ ಚಂದ್ರು,ರಾಮಕೃಷ್ಣ, ರಾಘವೇಂದ್ರ, ಮಣಿಕಂಠ, ರಾಜು, ಶಿವಕುಮಾರ್ ಹಾಜರಿದ್ದರು.