Monday, April 7, 2025
Google search engine

Homeರಾಜ್ಯಹನೂರು: ಜಮೀನಿಗೆ ಕಾಡಾನೆಗಳ ಲಗ್ಗೆ- ಬಾಳೆ ಫಸಲು ನಾಶ

ಹನೂರು: ಜಮೀನಿಗೆ ಕಾಡಾನೆಗಳ ಲಗ್ಗೆ- ಬಾಳೆ ಫಸಲು ನಾಶ

ಹನೂರು: ವೈಶಂಪಾಳ್ಯ ಗ್ರಾಮದ ಜಮೀನಿಗೆ ಕಾಡಾನೆಗಳು ಲಗ್ಗೆ ಇಟ್ಟಿದ್ದು, ಬಾಳೆ ಫಸಲು ನಾಶವಾಗಿದೆ.

ಹನೂರು ತಾಲ್ಲೂಕಿನ ವೈಶಂಪಾಳ್ಯ  ಗ್ರಾಮದ ರಾಮಸ್ವಾಮಿ ಎಂಬುವರ ಜಮೀನಿನಲ್ಲಿ‌‌ ತಡರಾತ್ರಿ ಕಾಡಾನೆ ದಾಳಿಗೆ ಅಪಾರ ಪ್ರಮಾಣ ಬಾಳೆ ಫಸಲು ನಾಶವಾಗಿದ್ದು, ಬೆಳ್ಳಂಬೆಳಗ್ಗೆ ಜಮೀನಿಗೆ ತೆರಳಿದ ರೈತನಿಗೆ ಆಘಾತ ಉಂಟಾಗಿದೆ.

ಈ ಭಾಗದ ಜಮೀನುಗಳಿಗೆ ಸಮೀಪದ ಅರಣ್ಯ ಪ್ರದೇಶದಿಂದ ಕಾಡಾನೆಗಳು ಆಗಾಗ್ಗೆ  ಆಗಮಿಸಿ ಜಮೀನಿನಲ್ಲಿದ್ದಂತಹ ವಿವಿಧ ಕೃಷಿ ಪರಿಕರಕಗಳು ಹಾಗೂ ವಿವಿಧ ಫಸಲನ್ನು ತುಳಿದು ನಾಶಪಡಿಸುತ್ತಿವೆ.

ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಕಾಡಾನೆಗಳ ಉಪಟಳ ಇನ್ನು ಕೂಡ ನಿಂತಿಲ್ಲ. ಆದ್ದರಿಂದ ಅರಣ್ಯಾಧಿಕಾರಿಗಳು ಇತ್ತ ಆಗಮಿಸಿ ಕಾಡಾನೆಯ ಉಪಟಳ ಕಡಿವಾಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಬೆಳೆ ನಾಶವಾಗಿರುವುದಕ್ಕೆ ನಷ್ಟ ಪರಿಹಾರವನ್ನು ಒದಗಿಸಬೇಕು ಎಂದು ರೈತ ರಾಮಸ್ವಾಮಿ ಅಳಲು ತೋಡಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular