ಚಾಮರಾಜನಗರ:ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಮಹದೇಶ್ವರ ದರ್ಶನ ಪಡೆದ ಬಳಿಕ , ಹನೂರಿಗೆ ಆಗಮಿಸಿದ್ದ ವೇಳೆ ಸ್ಥಳೀಯ ಮುಖಂಡರು ಸಿ.ಪಿ ಯೋಗೇಶ್ವರ್ ರವರನ್ನು ಸನ್ಮಾನಸಿದರು.
ಈ ವೇಳೆ ಹನೂರು ವಿಧಾನ ಸಭಾ ಕ್ಷೇತ್ರದ ಕುಡಿಯುವ ನೀರು ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಹಾಜರಿದ್ದವರೊಂದಿಗೆ ಚರ್ಚೆ ನಡೆಸಿದರು. ಬಳಿಕ ರಾಜ್ಯ ವ್ಯಾಪಿ ವಿಸ್ತರಿಸಿದೆ ಆಪರೇಷನ್ ಹಸ್ತ ಎಂಬ ಕುರಿತಾಗಿ ಮಾದ್ಯಮದವರು ಕೇಳಿದ ಪ್ರಶ್ನೆಗೆ ಈ ಪ್ರಶ್ನೆಗೆ ನೋ ಕಾಮೆಂಟ್ ಎಂದು ನಿರಾಕರಿಸಿದರು.
ಈ ವೇಳೆ ಸ್ಥಳೀಯ ಮುಖಂಡರಾದ ವೆಂಕಟೇಗೌಡ, ಕೃಷ್ಣೇಗೌಡ ಲ, ವೆಂಕಟೇಶ್ ,ಶ್ರೀನಿವಾಸ್ ಸೇರಿದಂತೆ ಹಲವರು ಹಾಜರಿದ್ದರು.