ಹನೂರು: ಸ್ಥಳೀಯ ಪಟ್ಟಣ ಪಂಚಾಯಿತಿಯ ಅನುಮತಿ ಪಡೆಯದೇ ಅನಧಿಕೃತವಾಗಿ ಅಳವಡಿಸಲಾಗಿದ್ದ 20 ಕ್ಕೂ ಹೆಚ್ಚು ವಿವಿಧ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಪಪಂ ಅಧಿಕಾರಿಗಳು ಹಾಗೂ ಪೋಲಿಸರ ಸಮ್ಮುಖದಲ್ಲಿ ತೆರವುಗೂಳಿಸಲಾಯಿತು
ಹನೂರು ಪಟ್ಟಣದಬಸ್ ನಿಲ್ದಾಣ ಸೇರಿದಂತೆ ಹಾಗೂ ಮಹದೇಶ್ವರಬೆಟ್ಟ ಮುಖ್ಯ ರಸ್ತೆಯಲ್ಲಿ ವಿವಿಧ ಪಕ್ಷದ ಬ್ಯಾನರ್‌ಗಳು ಹಾಗೂ ಪ್ಲೆಕ್ಸ್‌ಗಳು ವ್ಯಾಪಕವಾಗಿ ರಾರಾಜಿಸುತ್ತಿದ್ದವು. ಇದನ್ನು ಗಮನಿಸಿದ ಸ್ಥಳೀಯರು ಪಪಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅದರಂತೆ ಬುಧವಾರ 20 ಕ್ಕೂ ಹೆಚ್ಚು ಬ್ಯಾನರ್ ಹಾಗೂ ದೊಡ್ಡ ದೊಡ್ಡ ಫ್ಲೆಕ್ಸ್ ಗಳನ್ನು ತೆರವುಗೊಳಿಸಿದರು.
ನಂತರ ಅವುಗಳನ್ನು ಕಸ ಸಂಗ್ರಹಣೆಯ ಗೂಡ್ಸ್ ಗಾಡಿಯಲ್ಲಿ ಸಾಗಿಸಲಾಯಿತು.
ಇದರಿಂದ ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರಿಗೆ ಇರುಸು ಮುರುಸು ಉಂಟಾಗಿದ್ದು, ಇನ್ನೂ ಕೆಲವೆಡೆ ಅಸಮಾಧಾನ ವ್ಯಕ್ತಪಡಿಸಿದ ಘಟನೆಗಳು ನಡೆದವು.
ಆದರೆ ಪಟ್ಟಣ ಪಂಚಾಯತಿಯಿಂದ ಅನುಮತಿ ಇಲ್ಲದ್ದರಿಂದ ರಾಜಕೀಯ ಮುಖಂಡರ, ಬೆಂಬಲಿಗರು ಏನೂ ಮಾಡದ ಸ್ಥಿತಿಯಲ್ಲಿದ್ದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಮಹೇಶ್ ಪೋಲಿಸ್ ಪೇದೆ ರಾಘವೇಂದ್ರ,ಪಪಸಿಬ್ಬಂದಿಗಳಾದ ಮಂಜು, ಮಹೇಶ್, ಸೇರಿದಂತೆ ಹಲವರು ಹಾಜರಿದ್ದರು.