ಹನೂರು : ತಾಲೂಕಿನ ನೂತನ ತಹಶೀಲ್ದಾರ್ ಆಗಿ ವೈ.ಕೆ ಗುರುಪ್ರಸಾದ್ ಅವರನ್ನು ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿಯವರು ಆದೇಶ ಹೊರಡಿಸಿದ್ದಾರೆ.
ಹನೂರು ತಾಲೂಕು ತಹಸಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆನಂದಯ್ಯ ಅವರು ನಿವೃತ್ತಿ ಹೊಂದಿ ತೆರುವಾಗಿರುವ ತಹಶೀಲ್ದಾರ್ ಸ್ಥಾನಕ್ಕೆ ವೈ.ಕೆ ಗುರುಪ್ರಸಾದ್ ಅವರನ್ನು ಹನೂರು ತಾಲ್ಲೋಕು ಕಛೇರಿಗೆ ನೂತನ ತಹಶೀಲ್ದಾರ್ ರಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಈ ಹಿಂದೆ ವಿಧಾನ ಸಭೆ ಚುನಾವಣೆ ನಿಮಿತ್ತ ಹನೂರು ತಾಲೂಕು ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸಿದ್ದರು.