Sunday, April 20, 2025
Google search engine

Homeರಾಜ್ಯಮೋದಿ ಸಂಪುಟದಲ್ಲಿ ಮಂತ್ರಿಯಾಗುತ್ತಿರುವುದು ಸಂತಸ ತಂದಿದೆ: ಹೆಚ್.ಡಿ ಕುಮಾರಸ್ವಾಮಿ

ಮೋದಿ ಸಂಪುಟದಲ್ಲಿ ಮಂತ್ರಿಯಾಗುತ್ತಿರುವುದು ಸಂತಸ ತಂದಿದೆ: ಹೆಚ್.ಡಿ ಕುಮಾರಸ್ವಾಮಿ

ನವದೆಹಲಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗುತ್ತಿದ್ದಾರೆ. ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಕುಮರಸ್ವಾಮಿ, ಮೋದಿ ಸಂಪುಟದಲ್ಲಿ ಮಂತ್ರಿಯಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದುರು.

ನವದೆಹಲಿಯಲ್ಲಿ ಇಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ಯಾವುದೇ ಖಾತೆ ನೀಡಬೇಕು ಎಂದು ಒತ್ತಡ ಹಾಕಿಲ್ಲ. ಯಾವ ಖಾತೆ ನೀಡಬೇಕು ಎಂಬುದು ಮೋದಿಯವರಿಗೆ ಬಿಟ್ಟ ನಿರ್ಧಾರ. ಅವರಿಗೆ ನನಗಿಂತ ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಅವರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದಿದ್ದಾರೆ.

ಕೃಷಿ ಖಾತೆ ಕೊಟ್ಟರೆ ಬಹಳ ಸಂತೋಷ ಪಡಯತ್ತೇನೆ. ಸಕ್ಕರೆ ಖಾತೆಯೂ ಒಳ್ಳೆಯ ಖಾತೆ. ಆದರೆ ನಾನು ಇಂತಹದ್ದೇ ಖಾತೆ ಬೇಕು ಎಂದು ಹೇಳಿಲ್ಲ. ಜನರ ಮಧ್ಯೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂಬುದಷ್ಟೇ ನನ್ನ ಒಲವು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular