ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ತಾಲ್ಲೂಕಿನ ಕಂಚುಗಾರ ಕೊಪ್ಪಲು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಒತ್ತುವರಿ ಮಾಡಿಕೊಂಡಿದ್ದ ಹಾರಂಗಿ ನಾಲಾ ಪರಿವೀಕ್ಷಣಾ ಪಥದ ಸೇವಾ ರಸ್ತೆಯನ್ನು ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ತೆರವುಗೊಳಿಸಿದರು
ತಾಲೂಕಿನ ಕಂಚುಗಾರ ಕೊಪ್ಪಲು ಗ್ರಾಮದಲ್ಲಿ ಹಾದು ಹೋಗಿರುವ 26 ಬ್ರಾಂಚ್ ನಲ್ಲಿ ಸರ್ವೆ ನಂಬರ್ 47 ಹಿಡುವಳಿದಾರರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಹೊಸೂರು ಹಾರಂಗಿ ಉಪ ವಿಭಾಗದ ಎಇಇ ಆದರ್ಶ ಎಇ ಕಿರಣ್ ಈ ಕ್ರಮ ಕೈಗೊಂಡಿದ್ದಾರೆ.
ಒತ್ತುವರಿಯಿಂದ ಮಾಡಿದ್ದರಿಂದ ಗ್ರಾಮದ ಸ್ಮಶಾನಕ್ಕೆ ಹಾಗೂ ನೂರಾರು ಎಕರೆ ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆ ಕೈಗೊಳ್ಳ ರೈ ಸಮಸ್ಯೆಯಾಗಿತ್ತು ಜತೆಗೆ ಜನ ಜಾನುವಾರುಗಳ ಸಂಚಾರಕ್ಕೆ ಅನಾನುಕೂಲವಾಗಿತ್ತು ಈ ಹಿನ್ನೆಲೆಯಲ್ಲಿ ಕಂಚುಗಾರ ಕೊಪ್ಪಲು ಗ್ರಾಮದ ನಾಗಣ್ಣ, ಮಧು, ಸುಬ್ರಹ್ಮಣ್ಯ, ರಾಜೇಗೌಡ, ಜಲೇಂದ್ರ, ಕೃಷ್ಣ, ವಿಜಯ, ಲತಾ ಅವರುಗಳು ಹಾರಂಗಿ ನೀರಾವರಿ ಇಲಾಖೆ, ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಮನವಿ ಮಾಡಲಾಗಿತ್ತು.
ರೈತರ ಮನವಿಯ ಮೇರೆಗೆ ಇಲಾಖೆಯ ಅಧಿಕಾರಿಗಳು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸುವಂತೆ ನೋಟೀಸ್ ನೀಡಿದ್ದರು ಆದರೆ ಸ್ಪಂದಿಸದ ಹಿನ್ನೆಲೆಯಲ್ಲಿ ತಾಲೂಕು ಸರ್ವೆ ಮತ್ತು ಪೊಲೀಸರ ಸಹಕಾರದೊಂದಿಗೆ ಒತ್ತುವರಿ ತೆರವುಗೊಳಿಸಿದ್ದರಿಂದ ಗ್ರಾಮದ ಸ್ಮಶಾನಕ್ಕೆ ಹಾಗೂ ಜಮೀನುಗಳಿಗೆ ಒಡಾಡಲು ರೈತರಿಗೆ ಅನುಕೂಲವಾಗಿದ್ದು ಮನವಿಗೆ ಸ್ಪಂದಿಸಿದ ಅಧಿಕಾರಿಗಳನ್ನು ಗ್ರಾಮದ ಮುಖಂಡರು ಅಭಿನಂದಿಸಿದ್ದಾರೆ.
ಅಧಿಕಾರಿಗಳ ಕ್ರಮಕ್ಕೆ ಸಂತಸ ವ್ಯಕ್ತಪಡಿಸಿರುವ ರೈತರು ನಮ್ಮಗಳ ಮನವಿಗೆ ಸ್ಪಂದಿಸಿ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿರುವುದು ಅಭಿನಂದನೀಯ ಎಂದಿದ್ದಾರೆ.
ಸರ್ವೆಯರ್ ಮನು, ಸಹಾಯಕ ಸಬ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ಪೇದೆ ಮಧು, ಗಿರೀಶ್, ಮಹಿಳಾ ಪೇದೆ ರಾಣಿ
ಇದ್ದರು.