Friday, April 4, 2025
Google search engine

Homeಅಪರಾಧಅಪ್ರಾಪ್ತ ಬಾಲಕರಿಂದ ಕಿರುಕುಳ: ಮನನೊಂದು ನೇಣಿಗೆ ಶರಣಾದ ಬಾಲಕಿ

ಅಪ್ರಾಪ್ತ ಬಾಲಕರಿಂದ ಕಿರುಕುಳ: ಮನನೊಂದು ನೇಣಿಗೆ ಶರಣಾದ ಬಾಲಕಿ

ಮಂಡ್ಯ: ಅಪ್ರಾಪ್ತ ಬಾಲಕರಿಂದ ಕಿರುಕುಳ ಹಿನ್ನಲೆ ೧೫ ವರ್ಷದ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ನಡೆದಿದೆ. ಇಂಪನ(೧೫) ಮೃತ ಬಾಲಕಿ. ಬಾಲಕಿಯನ್ನ ಪ್ರೀತಿಸುವ ವಿಚಾರವಾಗಿ ಯುವಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಾಲಕಿಗೆ ಪ್ರೀತಿಸುವಂತೆ ಕೂಡ ಬಾಲಕರು ಒತ್ತಾಯ ಮಾಡಿದ್ದಾರೆ. ಇವರ ಮಾತಿನ ಚಕಮಕಿಯ ಆಡಿಯೋ ವೈರಲ್ ಆಗಿದೆ.

ಅಷ್ಟೇ ಅಲ್ಲ, ಅದನ್ನು ಮೃತ ಬಾಲಕಿಯ ತಾಯಿಯ ವಾಟ್ಸಪ್?ಗೂ ಬಾಲಕರು ಕಳುಹಿಸಿದ್ದಾರೆ. ಇದರಿಂದ ಮನನೊಂದು ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆ ನಂತರ ಅಪ್ರಾಪ್ತ ಬಾಲಕರು ಪರಾರಿಯಾಗಿದ್ದು, ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಕಾಣೆಯಾಗಿರುವ ಬಾಲಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular