Thursday, April 17, 2025
Google search engine

Homeಅಪರಾಧಆಸ್ತಿ ವಿವಾದಕ್ಕೆ ಪೊಲೀಸ್ ಸಿಬ್ಬಂದಿಯಿಂದ ಕಿರುಕುಳ: ಎಸ್ ಪಿ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಆಸ್ತಿ ವಿವಾದಕ್ಕೆ ಪೊಲೀಸ್ ಸಿಬ್ಬಂದಿಯಿಂದ ಕಿರುಕುಳ: ಎಸ್ ಪಿ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ದಾವಣಗೆರೆ: ಆಸ್ತಿ ವಿವಾದ ಸಂಬಂಧ ಪೊಲೀಸ್ ಸಿಬ್ಬಂದಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದಿದೆ.

ಚನ್ನಗಿರಿ ತಾಲೂಕಿನ ಶಿವಕುಳೆನೂರ ಗ್ರಾಮದ ನಿವಾಸಿ ವೇದಾವತಿ(55) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.

ಅಸ್ವಸ್ಥ ವೇದಾವತಿ ಎಂಬುವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಏನಿದು ಘಟನೆ ?

ಮಹಿಳೆ ಸಾಗುವಳಿ ಮಾಡುತ್ತಿದ್ದ 5 ಎಕರೆ ಜಮೀನು ವಿಚಾರವಾಗಿ ಸಂಬಂಧಿಯಾದ ಕಾನ್ಸ್ ​ಟೇಬಲ್ ವೆಂಕಟೇಶ್​ ನಡುವೆ ಜಗಳ ನಡೆಯುತ್ತಿತ್ತು. ಪೊಲೀಸ್ ಪ್ರಭಾವ ಬಳಸಿ ನಮಗೆ ಬಿತ್ತನೆ ಮಾಡಲು ಬಿಡುತ್ತಿಲ್ಲ ಎಂದು ಎಸ್​ಪಿ ಬಳಿ ದೂರು ನೀಡಲು ಹೋಗಿದ್ದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಪ್ರಕರಣದ ಮಾಹಿತಿ ಪಡೆದ ದಾವಣಗೆರೆ ಎಸ್ಪಿ ಡಾ.ಕೆ ಅರುಣ್ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.

ಈ ಘಟನೆ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES
- Advertisment -
Google search engine

Most Popular