ತುಮಕೂರು: ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸಹಾಯಕ ಸರ್ವೆಯರ್ (ಬಾಂದು ಜವಾನ) ಮಹೇಶ್ ಡಿ.ಸಿ ಕಚೇರಿ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕಳೆದ 6- 7 ವರ್ಷಗಳಿಂದ ಸಹಾಯಕ ಸರ್ವೆಯರಾಗಿ ಕೆಲಸ ಮಾಡ್ತಿದ್ದಂತಹ ಮಹೇಶ್ ಅವರಿಗೆ ಸರ್ವೆ ಮೇಲ್ವಿಚಾರಕಿ ಕವಿತಾ ಕೆಲಸ ಸರಿಯಾಗಿ ಮಾಡ್ತಿಲ್ಲವೆಂದು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರಂತೆ. ಇದರಿಂದಾಗಿ ಬೇಸತ್ತು ಇಂದು ಸಂಜೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹೇಶ್ ಡೆತ್ ನೋಟ್ ಬರೆದಿಟ್ಟು , ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸೂಕ್ತ ಚಿಕಿತ್ಸೆಗಾಗಿ ಮಹೇಶ್ ನನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.