ಮೈಸೂರು : ನಗರದ ಪ್ರತಿಷ್ಠಿತ ಯುವರಾಜ ಕಾಲೇಜಿನ ಪ್ರಾಂಶುಪಾಲರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಕಾಲೇಜಿನ ಗುಮಾಸ್ತರೊಬ್ಬರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ತೊಣಚಿಕೊಪ್ಪಲ್ ನಿವಾಸಿ ಯುವರಾಜ ಕಾಲೇಜಿನ ಪ್ರಥಮ ದರ್ಜೆ ಗುಮಾಸ್ತ ಶಿವಕುಮಾರ್ (೩೯) ಎಂಬವರೇ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದು, ಸಧ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ. ಹೆಚ್.ಸಿ ದೇವರಾಜೇಗೌಡ ಅವರು ನಿರಂತರವಾಗಿ ತಮಗೆ ಕಿರುಕುಳ ನೀಡುತ್ತಿದ್ದಾರೆಂದು ಡೆತ್‌ನೋಟ್‌ನಲ್ಲಿ ಬರೆದಿರುವ ಶಿವಕುಮಾರ್ ಕಾಲೇಜು ಆವರಣದಲ್ಲಿ ಕಾರಿನೊಳಗೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಡಾ. ಹೆಚ್.ಸಿ. ದೇವರಾಜೇಗೌಡ ಕಾರಣ. ಈತ ಪ್ರಾಂಶುಪಾಲರಾಗಿ ಬಂದಾಗಿನಿಂದಲೂ ಸಿಬ್ಬಂದಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಅಲ್ಲದೇ ಸರ್ವಾಧಿಕಾರಿ ರೀತಿ ದುರಾಡಳಿತ ನಡೆಸುತ್ತಿದ್ದಾರೆ.
ವಾಮ ಮಾರ್ಗದಿಂದ ಯುವರಾಜ ಕಾಲೇಜಿಗೆ ಪ್ರಾಂಶುಪಾಲರಾಗಿ ಬಂದಿದ್ದಾರೆ ಎಂದು ಶಿವಕುಮಾರ್ ಡೆತ್‌ನೋಟ್ ನಲ್ಲಿ ಬರೆದಿದ್ದಾರೆ.