Friday, April 11, 2025
Google search engine

Homeರಾಜ್ಯಸುದ್ದಿಜಾಲ‘ಹಾರಿದೊಡೆ ಸುರಿದಾವು’ ಪುಸ್ತಕ ಬಿಡುಗಡೆ, ಚೋಮನ ದುಡಿ ನಾಟಕ ಪ್ರದರ್ಶನ

‘ಹಾರಿದೊಡೆ ಸುರಿದಾವು’ ಪುಸ್ತಕ ಬಿಡುಗಡೆ, ಚೋಮನ ದುಡಿ ನಾಟಕ ಪ್ರದರ್ಶನ

ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ನಡೆಯುತ್ತಿರುವ ಓದಿನರಮನೆಯಲ್ಲಿ ತಿಂಗಳ ಒನಪು ಕಾರ್ಯಕ್ರಮ ಸರಣಿಯ ೧೭೮ನೇ ಸಂಚಿಕೆಯು ೧೧ನೇ ಜೂನ್ ೨೦೨೩ರಂದು ಬೆಂಗಳೂರು ಪಶ್ಚಿಮ ವಲಯ ಹಂಪಿನಗರ ನಗರ ಕೇಂದ್ರ ಗ್ರಂಥಾಲಯ ಗ್ರಂಥಾಂಗಣದಲ್ಲಿ ಸಂಜೆ ೫.೩೦ ಗಂಟೆಗೆ ಆರಂಭವಾಗುತ್ತದೆ.

ಡಾ. ಎಂ. ಬೈರೇಗೌಡ ಸಂಪಾದಿಸಿರುವ ಹಾರಿದೊಡೆ ಹರಿದಾವು ಕವನ ಸಂಕಲನವನ್ನು ಸಾಹಿತಿ ಆರ್. ಚಂದ್ರಶೇಖರ್ ಬಿಡುಗಡೆ  ಮಾಡುವರು. ಲೇಖಕಿ ಕವಿತಾ ಮುಚ್ಚಂಡಿ ಕೃತಿ ಪರಿಚಯ ಮಾಡಿಕೊಡುವರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್‌ಕುಮಾರ್ ಹೊಸಮನಿ, ಉಪನಿರ್ದೇಶಕಿ ಸಿ. ಪಾರ್ವತಮ್ಮ, ಕತೆಗಾರ ಬಿ. ರಾಜೇಂದ್ರಶೆಟ್ಟಿ, ನಿರೂಪಕ ಜಿ.ಪಿ. ರಾಮಣ್ಣ ಪಾಲ್ಗೊಳ್ಳುವರು.

ರೂಪಾಂತರ ರಂಗತಂಡ ಪ್ರಸ್ತುತ ಪಡಿಸುವ ಡಾ. ಶಿವರಾಮ ಕಾರಂತರ ಚೋಮನ ದುಡಿ ನಾಟಕ ಪ್ರದರ್ಶನವಿರುತ್ತದೆ. ಆರ್ ನಾಗೇಶ್ ರಂಗರೂಪಕ್ಕಿಳಿಸಿದ್ದು, ಕವಿ ಡಾ. ಸಿದ್ದಲಿಂಗಯ್ಯ ಈ ನಾಟಕಕ್ಕೆ ಹಾಡುಗಳನ್ನು ರಚಿಸಿದ್ದಾರೆ. ಕೆ.ಎಸ್.ಡಿ.ಎಲ್. ಚಂದ್ರ ನಿರ್ದೇಶಿದ್ದಾರೆ ಎಂದು ಕೆ.ಎಸ್.ಎಂ. ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular