ಶ್ರೀಲಂಕಾ: ಶ್ರೀಲಂಕಾದ ನೂತನ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರು ರಾಷ್ಟ್ರದ ನೂತನ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ ಅವರನ್ನ ಇಂದು ಮಂಗಳವಾರ ನೇಮಕ ಮಾಡಿದ್ದಾರೆ.
ಅಂದ್ಹಾಗೆ, ಶನಿವಾರ ನಡೆದ ಚುನಾವಣೆಯಲ್ಲಿ ದಿಸ್ಸಾನಾಯಕೆ ಅಧ್ಯಕ್ಷರಾಗಿ ಆಯ್ಕೆಯಾದರು.
ವಿಶ್ವವಿದ್ಯಾಲಯದ ಉಪನ್ಯಾಸಕ ಅಮರಸೂರ್ಯ ಅವರು ೨೦೨೦ರಲ್ಲಿ ನ್ಯಾಷನಲ್ ಪೀಪಲ್ಸ್ ಪವರ್ ಅಧಿಕಾರಕ್ಕೆ ಬಂದಾಗಿನಿಂದ ಸಂಸತ್ತಿನ ಸದಸ್ಯರಾಗಿದ್ದಾರೆ. ಅವರು ಶ್ರೀಲಂಕಾದ ಇತಿಹಾಸದಲ್ಲಿ ಮೂರನೇ ಮಹಿಳಾ ಪ್ರಧಾನಿಯಾದರು. ಪ್ರಧಾನ ಮಂತ್ರಿಯಾಗಿ, ನ್ಯಾಯಾಂಗ, ಶಿಕ್ಷಣ, ಕೈಗಾರಿಕೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಅನೇಕ ನಿರ್ಣಾಯಕ ಸಚಿವಾಲಯಗಳನ್ನು ನಿರ್ವಹಿಸುವುದು ಅವರ ಮುಖ್ಯ ಪಾತ್ರವಾಗಿದೆ.