Friday, April 11, 2025
Google search engine

Homeರಾಜಕೀಯಹರಿಪ್ರಸಾದ್ ಹೇಳಿಕೆ ಖಂಡನೀಯ: ಜೋಗಿ ಮಂಜು

ಹರಿಪ್ರಸಾದ್ ಹೇಳಿಕೆ ಖಂಡನೀಯ: ಜೋಗಿ ಮಂಜು

ಮೈಸೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಹೆಡಗೇ ವಾರ್ ಬಗ್ಗೆ ಶಾಸಕ ಬಿ.ಕೆ, ಹರಿಪ್ರಸಾದ್‌ ನೀಡಿರುವ ಹೇಳಿಕೆ ಖಂಡನೀಯ ಎಂದು ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾದ ಅಧ್ಯಕ್ಷ ಜೋಗಿ ಮಂಜು  ತಿಳಿಸಿದ್ದಾರೆ.

ಮಕ್ಕಳ ಪಠ್ಯದಲ್ಲಿ ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿರುವ ಎಲ್ಲಾ ಮಹನೀಯರ ಬಗ್ಗೆ ತಿಳಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕಿತ್ತು. ಆ ಕಾರ್ಯವನ್ನು ಬಿಜೆಪಿ ಸರ್ಕಾರ ಸಮರ್ಪಕವಾಗಿ ಮಾಡಿದೆ. ಜೈಲಿನಿಂದ ಹೊರಬರಲು ಬರೆದ ಕ್ಷಮಾಪಣಾ ಪತ್ರವನ್ನು ಹೇಡಿತನವೆಂದು ಪರಿಗಣ ಸುವುದಾದರೆ ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರ್‌ ಲಾಲ್ ನೆಹರು ಅವರನ್ನು ಕೂಡ ರಣ ಹೇಡಿಯಂದು ತಾವು ಪರಿಗಣಿಸಿ ಮಾತನಾಡಿದ್ದೀರಿ ಎಂದು ಕುಟುಕಿದ್ದಾರೆ.

ದೇಶ ಸೇವೆಗಾಗಿ ಸಮರ್ಪಿತವಾಗಿರುವ 95 ವರ್ಷ ಗಳಿಗೂ ಹೆಚ್ಚು ಕಾಲ ಸೇವಾ ಮನೋಭಾವನೆ ಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡುವ ನಿಮ್ಮ ಅಭ್ಯಾಸವನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸುವ ಬಗ್ಗೆ ಹೆಚ್ಚು ಚಿಂತಿಸುತ್ತಿಲ್ಲ. ಸರ್ಕಾರ ಬಂದು ಒಂದು ತಿಂಗಳೂ ಆಗಿಲ್ಲ. ಅಷ್ಟರೊಳಗೆ, ಧಾನ್ಯ ಗಳ ಬೆಲೆ ಹೆಚ್ಚಾಗಿದೆ, ರೈತರಿಗೆ ಸಿಗುತ್ತಿದ್ದ ಹಾಲಿನ ಪ್ರೋತ್ಸಾಹ ಧನವನ್ನು ಕಡಿಮೆ ಮಾಡಲಾಗಿದೆ. ವಿದ್ಯುತ್‌ ದರ ಹೆಚ್ಚಳವಾಗಿದೆ. ಬಸ್ ಪ್ರಯಾಣ ದರ ದುಪ್ಪಟ್ಟಾಗಿದೆ, ರಸಗೊಬ್ಬರ ವಿತರಣೆ ಬಗ್ಗೆ ನಿಮ್ಮ ಸರ್ಕಾರ ದಿವ್ಯ ಮೌನ ವಹಿಸಿದೆ. ಬಹುತೇಕ ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ ಇಷ್ಟೆಲ್ಲಾ ಸಮಸ್ಯೆಗಳ ಜೊತೆಯಲ್ಲಿ ತಮ್ಮ ಚೀಪ್ ಭಾಗ್ಯಗಳನ್ನು ಇನ್ನು ಜನರಿಗೆ ತಲುಪಿಸಲು ಆಗುತ್ತಿಲ್ಲ, ಜನರು ದಂಗೆ ಏಳುವ ಮೊದಲು ತಮ್ಮ ಸರ್ಕಾರವನ್ನು ಎಬ್ಬಿಸುವ ಕೆಲಸದ ಬಗ್ಗೆ ಗಮನ ಹರಿಸಿ ದರ್ಪದ ಮಾತುಗಳಿಗೆ ಕಡಿವಾಣ ಹಾಕಿ ಇಲ್ಲವಾದಲ್ಲಿ ಕಡಿವಾಣ ಹಾಕುವ ಕೆಲಸ ಮಾಡಬೇಕಾಗುತ್ತದೆ ಜೋಗಿ ಮಂಜು  ಎಚ್ಚರಿಸಿದ್ದಾರೆ.

RELATED ARTICLES
- Advertisment -
Google search engine

Most Popular