Friday, April 4, 2025
Google search engine

Homeಸ್ಥಳೀಯಯುಗಾದಿ: ಪೌರಕಾರ್ಮಿಕರ ಜೊತೆ ಹೋಳಿಗೆ ಊಟ ಸವಿದ ಹರೀಶ್ ಗೌಡ

ಯುಗಾದಿ: ಪೌರಕಾರ್ಮಿಕರ ಜೊತೆ ಹೋಳಿಗೆ ಊಟ ಸವಿದ ಹರೀಶ್ ಗೌಡ

ಮೈಸೂರು: ಮೈಸೂರು ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ 23ನೇ ವಾರ್ಡಿನಲ್ಲಿ ಯುಗಾದಿ ಹಬ್ಬದ ಅಂಗವಾಗಿ ಚಾಮರಾಜ ಕ್ಷೇತ್ರದ ಶಾಸಕರಾದ ಹರೀಶ್ ಗೌಡರವರು ನಮ್ಮ ಸಮಾಜದ ಸ್ವಾಸ್ಥವನ್ನು ಸಮರ್ಪಕವಾಗಿ ಕಾಯ್ದುಕೊಳ್ಳುವಲ್ಲಿ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪೌರಕಾರ್ಮಿಕರೊಂದಿಗೆ ಬೆರತು ಅವರ ಕಷ್ಟ ಸುಖಗಳನ್ನು ಆಲಿಸಿ ಅವರಿಗೆ ಹೋಳಿಗೆ ಊಟದ ಆತಿಥ್ಯ ನೀಡಿ ಅವರ ಜೊತೆ ಕುಳಿತು ಉಪಹಾರ ಸೇವಿಸಿದರು. ಅದಕ್ಕೂ ಮುನ್ನ ಪೌರಕಾರ್ಮಿಕರಿಗೆ ಬೇವುಬೆಲ್ಲ ವಿತರಿಸಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷರಾದ ಮೈಕಾ ಪ್ರೇಮ್ ಕುಮಾರ್,ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಮಹದೇವ್, ಗುರುರಾಜ್ ಶೆಟ್ಟಿ, ಪ್ರಮೋದ್ ಗೌಡ, ನವೀನ್, ಸಂದೀಪ್,ಹರೀಶ್ ಗೌಡ, ರವಿಚಂದ್ರ, ನೀತು,ಶಿವು, ರವಿ, ಎಸ್ ಎನ್ ರಾಜೇಶ್, ಸಂತೋಷ್, ಮಂಜು, ಜಗದೀಶ್
ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular