ಮೈಸೂರು: ಕೌಟುಂಬಿಕ ಬದುಕಿನಲ್ಲಿ ಸಾಮರಸ್ಯದಿಂದ ಕಷ್ಟಗಳನ್ನು ಎದುರಿಸಲು ಸಾಧ್ಯಎಂದು ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಬಿಳಿಗಿರಿರಂಗನಬೆಟ್ಟದ ಜೆಎಸ್‌ಎಸ್ ಆಶ್ರಮದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಪರಮ ಪೂಜ್ ಯಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದಗಳೊಂದಿಗೆ ಸಾರ್ವಜನಿಕರಿಗಾಗಿ ಏರ್ಪಡಿಸಿರುವ ಜೀವನೋತ್ಸಾಹ ಶಿಬಿರದ ನಾಲ್ಕನೇ ದಿನ ಕೌಟುಂಬಿಕ ಸಾಮರಸ್ಯ ಕುರಿತು ಉಪನ್ಯಾಸ ನೀಡುತ್ತಾ ತಿಳಿಸಿದರು.
ಸುಖವನ್ನು ಹಂಚಿಕೊಂಡಾಗ ಸಂತೋಷ್ ಹೆಚ್ಚುತ್ತದೆ.ದೇವರದಯೆ ಎಂಬುದು ಸಂಕಷ್ಟದ ಸ್ವರೂಪದಲ್ಲೂ ಬರುವ ಸಾಧ್ಯತೆಯಿರುತ್ತದೆ.ಇಂದಿನ ಸಮಾಜದಲ್ಲಿ ಹಲವಾರು ಪ್ರಲೋಭನೆಗಳು ಸಾಮರಸ್ಯದ ಮೇಲೆ ಪ್ರಭಾವ ಬೀರುತ್ತವೆ. ಧಾರ್ಮಿಕ ವಿಧಿ-ವಿಧಾನಗಳ ನೆಲೆಯಲ್ಲಿ ನಮ್ಮಕೌಟುಂಬಿಕ ಸಾಮರಸ್ಯಅಡಗಿದೆ.ಸೇವೆ, ಪ್ರಾಮಾಣಿಕತೆ, ಸತ್ಯ, ನಿಷ್ಠೆ ಇವೆಲ್ಲವೂ ಸಾಮರಸ್ಯದ ಅಂಗಗಳು ಎಂದು ಹೇಳಿದರು.
ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ವೀರೇಶಾನಂದಜೀಯವರು ಭಾರತೀಯ ಸಂಸ್ಕೃತಿ ಅತ್ಯುನ್ನತವಾದುದು. ಜಗತ್ತಿನಲ್ಲಿ ಎಲ್ಲಿಯೂಕಾಣದ ಶ್ರೀಮಂತ ಪರಂಪರೆ ನಮ್ಮದೆಂಬುದು ನಾವೆಲ್ಲರೂಹೆಮ್ಮೆ ಪಡಬೇಕಾದ ಸಂಗತಿ.ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಇಂದಿನ ಮಕ್ಕಳಿಗೆ ತಿಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಿಜವಾದಜೀವನ ಎಂದರೆ ಮೌಲ್ಯ ಪೂರ್ಣವಾದದ್ದು. ಜಗತ್ತಿನಲ್ಲಿ ಅಶಾಂತಿಗೆ ಕಾರಣರಾದವರು ಎಲ್ಲಿಯೂ ಸ್ಥಾನ ಪಡೆದಿಲ್ಲ. ಶಾಂತಿಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳು ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆಎಂದು ತಿಳಿಸಿದರು. ಭಾರತೀಯ ವಿಜ್ಞಾನ ಸಂಸ್ಥೆಯ ಮುಖ್ಯ ಸಂಶೋಧನಾ ವಿಜ್ಞಾನಿಗಳಾದಡಾ.ಎಸ್.ಎನ್. ಓಂಕಾರ್‌ರವರುಎಲ್ಲಾ ಶುಭಕಾರ್ಯಗಳು ಮೊದಲಿಗೆ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳುವುದು. ದೇವರು ಸರ್ವಾಂತರ್ಯಾಮಿ ಆ ಭಗವಂತನನ್ನುಕಾಣಲು ಪ್ರಾರ್ಥನೆಯು ಮುಖ್ಯವಾಗುತ್ತದೆ.ಪ್ರಾಮಾಣಿಕ ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ. ಸ್ವಾರ್ಥದಉದ್ದೇಶದಿಂದ ಪ್ರಾರ್ಥನೆ ಸಲ್ಲದು.ಸಮಷ್ಟಿಯ ಒಳಿತಿಗೆ ಪ್ರಾರ್ಥಿಸಬೇಕುಎಂದು ಹೇಳಿದರು.
ಶಿಬಿರಾರ್ಥಿಗಳು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ-ಧ್ಯಾನದಲ್ಲಿ ಪಾಲ್ಗೊಂಡಿದ್ದರು.ಸಂಜೆ ದೇಸಿ ಆಟಗಳನ್ನು ಆಡಿದರು.ಸಾಮೂಹಿಕ ಪ್ರಾರ್ಥನೆ ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕಕಾರ್ಯಕ್ರಮ ನೀಡಿದರು.ಶಿಬಿರದಲ್ಲಿ ತುಮಕೂರು, ಬೆಳಗಾವಿ, ಬೆಂಗಳೂರು, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ೭೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.