ಬಹುಕಾಲದ ಸ್ನೇಹಿತರಾಗಿದ್ದ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಕಳೆದ ವರ್ಷ ಆಗಸ್ಟ್ 24ರಂದು ಕೊಡಗಿನಲ್ಲೇ ಕೊಡವ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು. ಇದೀಗ ಸ್ಟಾರ್ ದಂಪತಿ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಕೊಡವ ಸಂಪ್ರದಾಯದ ಉಡುಗೆಯಲ್ಲೇ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿರುವ ದಂಪತಿ ಮಗುವಿನ ಆಗಮನದ ಸುದ್ದಿ ಘೋಷಿಸಿದ್ದಾರೆ. ಇದೇ ಅಕ್ಟೋಬರ್‌ನಲ್ಲಿ ಮಗು ಬರಲಿರುವ ಸಂತಸದಲ್ಲಿದ್ದಾರೆ ಹರ್ಷಿಕಾ ದಂಪತಿ.
ಕೊಡವ ಸಂಪ್ರದಾಯದ ಹಳ್ಳಿ ಮನೆಯಲ್ಲಿ ಕ್ಲಾಸಿಕ್ ಶೈಲಿಯಲ್ಲಿ ದಂಪತಿ ಫೋಟೋಶೂಟ್ ಮಾಡಿಸಿದ್ದಾರೆ. ಇಡೀ ಕುಟುಂಬ ಅದೇ ಶೈಲಿಯಲ್ಲೇ ಕಂಗೊಳಿಸಿದೆ. ಕಪ್ಪು ಮಿಶ್ರಿತ ಬ್ರೌನ್ ಕಲರ್ ಕೊಡವ ಶೈಲಿಯ ಸೀರೆ ಧರಿಸಿರುವ ಹರ್ಷಿಕಾ ಬೇಬಿ ಬಂಪ್ ಪ್ರದರ್ಶಿಸಿದ್ದಾರೆ. ಇನ್ನು ತಂದೆಯಾಗುತ್ತಿರುವ ಭುವನ್ ಪೊನ್ನಣ್ಣ ಕೊಡವ ಸಂಪ್ರದಾಯದ ಕಪ್ಪು ಕೋಟ್ ಧರಿಸಿ-ತಲೆಗೆ ಪೇಟಾ ಧರಿಸಿ ಕೈಯಲ್ಲಿ ಬಂದೂಕು ಹಿಡಿದು ಗರ್ಭಿಣಿ ಪತ್ನಿ ಜೊತೆ ನಿಂತಿದ್ದಾರೆ.