Friday, April 18, 2025
Google search engine

Homeರಾಜ್ಯಸುದ್ದಿಜಾಲನ.೨ ರಿಂದ ೧೪ರ ವರೆಗೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ

ನ.೨ ರಿಂದ ೧೪ರ ವರೆಗೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ

ಹಾಸನ : ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸಲಿರುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ನಾಳೆಯಿಂದ ನ. ೨ ರಿಂದ ೧೪ರ ತನಕ ನಡೆಯಲಿದೆ. ಇಂದು ದೇವಿಯ ಒಡವೆಗಳನ್ನು ದೇವಾಲಯಕ್ಕೆ ಕೊಂಡೊಯ್ಯಲಾಯಿತು. ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಬಾರಿ ೧೪ ದಿನಗಳ ಕಾಲ ದೇವಾಲಯ ಬಾಗಿಲು ತೆರೆಯಲಿದೆ. ಮೊದಲ ದಿನ ಹಾಗೂ ಕೊನೆಯ ದಿನ ಭಕ್ತರಿಗೆ ಅವಕಾಶವಿರುವುದಿಲ್ಲ. ಬದಲಿಗೆ ಬದಲಾಗಿ ಗರ್ಭಗುಡಿಯ ಬಾಗಿಲು ತೆರಯಲಿದೆ.

ಹಾಸನ ತಹಶೀಲ್ದಾರ್ ಶ್ವೇತ ಸಮ್ಮುಖದಲ್ಲಿ ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಒಡವೆಗಳನ್ನು ಹೊರತಂದು ಪುಷ್ಪಾಲಂಕೃತ ಅಡ್ಡ ಪಲ್ಲಕ್ಕಿಯಲ್ಲಿ ಇರಿಸಲಾಯಿತು. ಸಂಪ್ರದಾಯದಂತೆ ಮಡಿವಾಳರು ಪಂಜು ಹಿಡಿದು ಮತ್ತು ಮುತ್ತೈದೆಯರು ಆರತಿ ಬೆಳಗಿದರು. ಈ ವೇಳೆ ಭಕ್ತರು ಹಾಸನಾಂಬೆ ದೇವಿಗೆ ಜೈಕಾರ ಕೂಗಿದರು. ಬೆಳ್ಳಿ ರಥದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಹಾಸನಾಂಬೆ ದೇಗುಲಕ್ಕೆ ತರಲಾಯಿತು.

RELATED ARTICLES
- Advertisment -
Google search engine

Most Popular