Wednesday, October 8, 2025
Google search engine

Homeರಾಜ್ಯಸುದ್ದಿಜಾಲಹಾಸನಾಂಬೆ ದೇವಾಲಯ ನಾಳೆಯಿಂದ ಆರಂಭ : ವಿಐಪಿ ದರ್ಶನಕ್ಕೆ ಹೊಸ ನಿಯಮ

ಹಾಸನಾಂಬೆ ದೇವಾಲಯ ನಾಳೆಯಿಂದ ಆರಂಭ : ವಿಐಪಿ ದರ್ಶನಕ್ಕೆ ಹೊಸ ನಿಯಮ

ಹಾಸನ : ಜಿಲ್ಲೆಯ ಪ್ರಸಿದ್ಧ ಅಧಿದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವ ನಾಳೆಯಿಂದ ಆರಂಭವಾಗಲಿದ್ದು, ಈ ಹಿನ್ನಲೆ ಜಿಲ್ಲಾಡಳಿತ ಎಲ್ಲಾ ರೀತಿಯ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

ನಾಳೆ ಅ. 9ರಿಂದ 23ರವರೆಗೆ ಹಾಸನಾಂಬೆ ಉತ್ಸವ ನಡೆಯಲಿದ್ದು, ಅ. 10ರಿಂದ 22ರ ತನಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರಲಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಹಾಸನಾಂಬೆಯ ಉತ್ಸವಕ್ಕೆ ಜಿಲ್ಲಾಡಳಿತವು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ವರ್ಷ 12 ದಿನಗಳವರೆಗೆ ದೇವಿಯ ದರ್ಶನಕ್ಕೆ ಅವಕಾಶವಿದ್ದು, ಅಂದಾಜು 20 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ವರ್ಷಕ್ಕೊಮ್ಮೆ ಸಿಗುವ ಹಾಸನಾಂಬೆ ದೇವಿಯ ದರ್ಶನಕ್ಕೆ ಸಹಸ್ರಾರು ಭಕ್ತಗಣ ಕಾದು ಕುಳಿತಿದೆ.

ದೇವಾಲಯಕ್ಕೆ ಬಂದ ಒಡವೆಗಳು: ದೇವಿಗೆ ಹಾಕಲಾಗುವ ಒಡವೆಗಳನ್ನ ಸಾಲಗಾಮೆ ರಸ್ತೆಯ ಜಿಲ್ಲಾ ಖಜಾನೆಯಿಂದ ಬೆಳ್ಳಿ ರಥದಲ್ಲಿ ದೇವಾಲಯಕ್ಕೆ ತರಲಾಗಿದೆ. ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ್ ಒಡವೆಗಳಿಗೆ ಪೂಜೆ ಮಾಡಿದ್ದು, ತಹಸೀಲ್ದಾರ್, ಪೊಲೀಸರ ಸಮ್ಮುಖದಲ್ಲಿ ಮಂಗಳವಾದ್ಯಗಳೊಂದಿಗೆ ಒಡವೆಗಳನ್ನು ದೇವಸ್ಥಾನಕ್ಕೆ ಒಪ್ಪಿಸಲಾಗಿದೆ. 

ವಿಐಪಿ ದರ್ಶನಕ್ಕೆ ರೂಲ್ಸ್: ವಿಐಪಿಗಳು ದರ್ಶನಕ್ಕೆ ಬಂದರೆ ಇದರಿಂದ ಜನ ಸಾಮಾನ್ಯರಿಗೆ ಬಹಳ ತೊಂದರೆ ಆಗುತ್ತಿತ್ತು. ಅದರಲ್ಲೂ ಅವರ ಜೊತೆ ಇನ್ನೂ 10 ರಿಂದ 15 ಜನ ಬರುವುದರಿಂದ ಬಹಳಷ್ಟು ಹೊತ್ತು ಜನ ಜ್ಯೂನಲ್ಲಿ ಕಾಯಬೇಕಿತ್ತು. ಹಾಗಾಗಿ ಈ ಬಾರಿ ವಿಐಪಿಗಳ ದರ್ಶನಕ್ಕೆ ಸಹ ನಿಯಮಗಳನ್ನ ಜಾರಿ ಮಾಡಲಾಗಿದೆ. 

ಈ ಬಾರಿ ಗಣ್ಯರ ಜೊತೆ ಕೇವಲ 4 ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ ಇಡೀ ದಿನ ಅವಕಾಶ ನೀಡುವುದಿಲ್ಲ. ಕೇವಲ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇವುಗಳನ್ನ ನಿರ್ವಹಣೆ ಮಾಡಲು ಹಾಸನ ಎಡಿಸಿ ನಿಯೋಜನೆ ಮಾಡಲಾಗಿದೆ. 

ಆದರೆ ವಿಐಪಿ ಪಾಸ್‌ ಇರುವವರಿಗೆ ಪ್ರತಿದಿನ ಬೆಳಗ್ಗೆ 7 ರಿಂದ ಬೆಳಿಗ್ಗೆ 10 ಗಂಟೆವರೆಗೆ ಸಹ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಹಾಗೆಯೇ, ಬೆಳಿಗ್ಗೆ 7:30 ರಿಂದ ಬೆಳಿಗ್ಗೆ 10:30 ರವರೆಗೂ ಗೋಲ್ಡ್ ಪಾಸ್ ಇದ್ದವರಿಗೆ ಅವಕಾಶ ನೀಡಲಾಗುತ್ತದೆ.  

ಅಕ್ಟೋಬರ್ 21 ಮತ್ತು 22ರಂದು ಈ ರೀತಿ ವಿಐಪಿ ಪ್ರೋಟ್‌ ಕಾಲ್‌ ದರ್ಶನ ಇರುವುದಲ್ಲ. ಬರೀ ಸಾರ್ವಜನಿಕರಿಗೆ ಮಾತ್ರ ದರ್ಶನ ವ್ಯವಸ್ಥೆ ಮಾಡಲಾಗುತ್ತದೆ. ಅದರ ಜೊತೆಗೆ ಒಂದು ದಿನಕ್ಕೆ ಒಂದು ಸಾವಿರ ಮಂದಿಗೆ ಮಾತ್ರ ಪಾಸ್‌ಗಳನ್ನ ಕೊಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇನ್ನು ವಿಶೇಷ ದರ್ಶನಕ್ಕೆ 300 ರೂ. 1000 ರೂ. ಪಾಸ್ ವ್ಯವಸ್ಥೆ ಮಾಡಲಾಗಿದ್ದು, ವಿಐಪಿ, ವಿವಿಐಪಿ ಪಾಸ್ ರದ್ದು ಮಾಡಲಾಗಿದೆ. ಅಲ್ಲದೇ ಗೋಲ್ಡ್ ಪಾಸ್ ಜಾರಿಗೆ ತರಲಾಗಿದ್ದು, ಇದರಲ್ಲಿ ಒಂದು ಪಾಸ್ ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.

RELATED ARTICLES
- Advertisment -
Google search engine

Most Popular