ಮೈಸೂರು : ಹಾಸನ ಜಿಲ್ಲಾ ಬಳಗ ಜಾತ್ಯಾತೀತ ಬಳಗವಾಗಿದ್ದು, ಸಾಮಾಜಿಕವಾಗಿ ಒಂದು ಸಮಾಜವನ್ನು ಬೆಸೆಯುವಂತಹ ಭಾವೈಕ್ಯತೆಯ ಉದ್ದೇಶವನ್ನು ಹಾಸನ ಜಿಲ್ಲಾ ಬಳಗ ಹೊಂದಿದೆ ಎಂದು ವಿಶ್ರಾಂತ ಕುಲಪತಿ ಡಾ. ಪದ್ಮಾಶೇಖರ್ ತಿಳಿಸಿದರು.
ಹಾಸನ ಜಿಲ್ಲಾ ಬಳಗದ ವತಿಯಿಂದ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರ್ ಸಭಾಂಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಲಭೂತವಾಗಿ ಇಂದು ನಮ್ಮ ಶಿಕ್ಷಣ ವ್ಯವಸ್ಥೆ ಸರಿಯಿಲ್ಲ. ಹಿಂದೆ ಶಿಕ್ಷಣ ಜೀವನವನ್ನು ಕಲಿಸುವ ಪಾಠಶಾಲೆಯಾಗಿತ್ತು. ಸಾಮೂಹಿಕವಾಗಿತ್ತು ಸಾರ್ವತ್ರಿಕತೆ ಇತ್ತು. ಇಂದಿನ ಶಾಲೆಗಳು ಶಾಂಗಿಕಶಾಲೆಗಳಾಗಿವೆ. ಮಕ್ಕಳು ಮಕ್ಕಳಲ್ಲಿಯೇ ತಾರತಮ್ಯ ಮಾಡಿಕೊಂಡು ಹೋಗುತ್ತಿದ್ದೇವೆ. ನಮ್ಮ ಮಕ್ಕಳಲ್ಲಿ ಸಮಭಾವ ಬೆಳೆಯುತ್ತಿಲ್ಲ. ಬಾಲಾಪರಾದಗಳ ಸಂಖ್ಯೆ ಹೆಚ್ಚಾಗುತ್ತಿದೆ. ೨೦-೨೧ನೇ ಸಾಲಿನಲ್ಲಿ ೩೧ ಸಾವಿರದ ೧೭೦ ಮಕ್ಕಳು ಬಾಲಾಪರಾಧಿಗಳಾಗಿದ್ದಾರೆ. ಇದನ್ನು ಕುರಿತು ಪೋಷಕರು ಯೋಚನೆ ಮಾಡಬೇಕು ಎಂದ ಅವರು, ಹಾಸನ ಜಿಲ್ಲೆಗೆ ತನ್ನದೇ ಆದ ಇತಿಹಾಶವಿದ್ದು, ಭಾರತದಲ್ಲಿ ಹಾಸನ ಜಿಲ್ಲೆ ಬಿಟ್ಟು ಇತಿಹಾಸ ಬರೆಯಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕ ಕೆ. ಹರೀಶ್‌ಗೌಡ, ಬಾಲಾಜಿ ಶೇಖರ್, ಗೌರವ ಅಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ, ಬಿ.ಜಿ. ರಂಗೇಗೌಡ, ರೇವಣ್ಣ, ಮಾಜಿ ಮೇಯರ್ ಮೋದಾಮಣಿ, ರಮೇಶ್ ರಾಮಚಂದ್ರ, ಪುಟ್ಟಸ್ವಾಮಿ ಗೌಡ, ಅಣ್ಣೇಗೌಡ, ತುಕುರಾಂರಾವ್, ಶಶಿಕುಮಾರ್ ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಮಾಡಲಾಯಿತು ಹಾಗೂ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.