Tuesday, April 22, 2025
Google search engine

Homeಅಪರಾಧಹಾಸನ: ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸ್ತಿಲ್ಲ ಎಂದು ಮಾವನನ್ನೇ ಕೊಂದ ಅಳಿಯ

ಹಾಸನ: ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸ್ತಿಲ್ಲ ಎಂದು ಮಾವನನ್ನೇ ಕೊಂದ ಅಳಿಯ

ಹಾಸನ: ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸ್ತಿಲ್ಲ ಎಂದು ಕೋಪಗೊಂಡ ಅಳಿಯ, ಕುಡಿದ‌ ಮತ್ತಿನಲ್ಲಿ ಮಾವನ ಮೇಲೆ ಹಲ್ಲೆ ಮಾಡಿ ಮಾವನನ್ನೇ ಹತ್ಯೆಗೈದ ಘಟನೆ ಹಾಸನದಲ್ಲಿ ನಡೆದಿದೆ.

ಬೇಲೂರು ತಾಲೂಕಿನ ರಾಮೇನಹಳ್ಳಿಯ ತಮ್ಮಯ್ಯ (64) ಮೃತ ವ್ಯಕ್ತಿ. ಬಲ್ಲೇನಹಳ್ಳಿ ಗ್ರಾಮದ ಅಳಿಯ ಜಗದೀಶ್ (45) ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.

20 ವರ್ಷಗಳ ಹಿಂದೆ ತಮ್ಮಯ್ಯ ಪುತ್ರಿಯನ್ನು ಜಗದೀಶ್ ಮದುವೆಯಾಗಿದ್ದ. ತಮ್ಮಯ್ಯಗೆ ಗಂಡು ಮಕ್ಕಳಿಲ್ಲದ ಕಾರಣ ತನ್ನನ್ನು ನೋಡಿಕೊಳ್ಳಲೆಂದು ಮಗಳನ್ನು ಮನೆಯಲ್ಲೇ ಇರಿಸಿಕೊಂಡಿದ್ದ. ಮತ್ತೊಂದೆಡೆ ಪತಿ ಜಗದೀಶ್, ತನಗೆ ಮನೆಯ ಜವಾಬ್ದಾರಿ ನೀಡುತ್ತಿಲ್ಲ ಎಂದು ಪತ್ನಿಯನ್ನ ತನ್ನ ಮನೆಗೆ ವಾಪಸ್ ಕಳಿಸುವಂತೆ ಪದೇ ಪದೆ ಜಗಳ ಮಾಡುತ್ತಿದ್ದ.

ನಿನ್ನೆ ಮನೆ ಬಳಿಯೇ ಬಂದು ಮಾವನ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಹಲ್ಲೆಯಿಂದ ಅಸ್ವಸ್ಥಗೊಂಡಿದ್ದ ತಮ್ಮಯ್ಯನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು ಸಂಭವಿಸಿದೆ.

ಸಾರ್ವಜನಿಕರು ಜಗದೀಶ್‌ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಡಿತದ ದಾಸನಾಗಿದ್ದ ಆರೋಪಿ ಪೊಲೀಸರ ವಶದಲ್ಲಿದ್ದಾನೆ.

ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular