ಹಾಸನ : ಹಾಸನದ ಹಾಸನಂಬ ದೇಗುಲದ ಗರ್ಭಗುಡಿ ಇದೀಗ ಓಪನ್ ಆಗಿದೆ. ಅರಸು ವಂಶಸ್ಥರು ಬಾಳೆ ಗಿಡ ಕಡಿದ ನಂತರ ದೇಗುಲದ ಪ್ರಧಾನ ಅರ್ಚಕರು ಹಾಸನಾಂಬ ದೇಗುಲದ ಬಾಗಿಲನ್ನು ತೆರೆದರು.
ಇಂದಿನಿಂದ ನವೆಂಬರ್ ೩ರವರೆಗೆ ಹಾಸನಾಂಬೆ ಜಾತ್ರೆ ನಡೆಯಲಿದೆ. ನಾಳೆಯಿಂದ ನವೆಂಬರ್ ೨ರವರೆಗೆ ಹಾಸನಾಂಬೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ,ಸಚಿವ ಕೆ ಎನ್ ರಾಜಣ್ಣ, ಹಾಸನ ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಓಪನ್ ಮಾಡಲಾಯಿತು. ವಿಶೇಷ ಹೂವಿನ ಅಲಂಕಾರದಿಂದ ದೇವಸ್ಥಾನ ಕಂಗೊಳಿಸುತ್ತಿದೆ.