Monday, April 21, 2025
Google search engine

Homeಅಪರಾಧಹಾವೇರಿ: ಅಳಿಯನನ್ನು ಕೊಂದು ಹೆದ್ದಾರಿ ಬದಿ ಎಸೆದು ಹೋದ ಮಾವ

ಹಾವೇರಿ: ಅಳಿಯನನ್ನು ಕೊಂದು ಹೆದ್ದಾರಿ ಬದಿ ಎಸೆದು ಹೋದ ಮಾವ

ಹಾವೇರಿ: ಮಾವನೇ ಅಳಿಯನನ್ನು ಕೊಂದು ಹೆದ್ದಾರಿ ಬದಿ ಎಸೆದು ಹೋಗಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಸಲೀಂ ದಾದಾಫೀರ್ ಒಲೆಕಾರ್ ( 29) ಎನ್ನಲಾಗಿದೆ.

ಕೊಲೆಯಾದ ವ್ಯಕ್ತಿಯ ಮಾವನೇ ಅಳಿಯನ ಕೊಲೆ ನಡೆಸಿದ್ದು ಇದೀಗ ಆರೋಪಿ ಪೋಲೀಸರ ವಶದಲ್ಲಿದ್ದಾರೆ.

ಒಲೆಕಾರ್ ಗೆ ಬಿಯರ್ ಕುಡಿಸಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಬಳಿಕ ಶವವನ್ನು ನಗರದ ಹೊರವಲಯ ಗದಗ-ಹೊನ್ನಾಳಿ ಹೆದ್ದಾರಿ ಪಕ್ಕದಲ್ಲಿ ಎಸೆದು ಹೋಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮಾವ ಹೈದರ ಚಮನಸಾಬ್ ಹಲಗೇರಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿ ಹಾಗೂ ಆರೋಪಿ ಇಬ್ಬರೂ ಮಾಗೋಡ ಗ್ರಾಮದವರು ಎಂದು ಹೇಳಲಾಗಿದೆ.

ಕೊಲೆಗೆ ಅನೈತಿಕ ಸಂಬಂಧ ಕಾರಣ ಎನ್ನಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular