ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ಪ್ರತಿಯೊಬ್ಬ ಜನಾಂಗದವರು ಸಂಘಗಳನ್ನು ಪ್ರಾರಂಭ ಮಾಡುವುದು ಸುಲಭ ಅದನ್ನು ಮುನ್ನಡೆಸುವುದು ತುಂಬಾ ಕೋಟೆ ಕಷ್ಟಕರ ವಿಚಾರ ಎಂದು ಪುರಸಭಾ ಸದಸ್ಯ ವೈ. ಬಿ ಹರೀಶ್ ರವರು ತಿಳಿಸಿದರು.
ಇಂದು ಎಚ್ ಡಿ ಕೋಟೆ ತಾಲೂಕಿನ ಹ್ಯಾಂಡ್ ಪೋಸ್ಟಿನಲ್ಲಿ ಹಮ್ಮಿಕೊಂಡಿದ್ದ ಹೆಚ್ ಡಿ ಕೋಟೆ ಮತ್ತು ಸರಗೂರು ತಾಲೂಕು 24 ಮನೆ ತೆಲುಗು ಶೆಟ್ಟರ ಜನಾಂಗದ ಪ್ರಥಮ ವರ್ಷದ ವಾರ್ಷಿಕ ಸಭೆ ಹಾಗೂ 2025ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಎಲ್ಲರೂ ಮುಂಚೂಣಿಯಿಂದ ಸಂಘ ಸಂಸ್ಥೆಗಳನ್ನು ಪ್ರಾರಂಭ ಮಾಡುತ್ತೇವೆ, ಆದರೆ ಸಂಘಗಳು ಹೆಚ್ಚು ದಿನಗಳು ಸಂಘಗಳನ್ನು ಕಾಪಾಡಿಕೊಳ್ಳುವುದು ಕಷ್ಟ ಆದ್ದರಿಂದ ಎಲ್ಲರೂ ಹೊಗ್ಗೂಡಿ ಸಂಘವನ್ನು ಮುನ್ನಡೆಸುವ ಮುಖಾಂತರ ತಾಲೂಕಿಗೆ ಒಳ್ಳೆಯ ಹೆಸರನ್ನು ತರುವ ಮೂಲಕ ನಿಮ್ಮ ಸಂಘ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.
ಪುರಸಭಾ ಸದಸ್ಯ ಪ್ರೇಮ್ ಸಾಗರ್ ಮಾತನಾಡಿ, ನಿಮ್ಮ ಸಮುದಾಯಕ್ಕೆ ಒಂದು ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ಮುಖಾಂತರ ಕಾಲಿ ನಿವೇಶನವನ್ನು ಮಂಜೂರು ಮಾಡಿಸಲು ನಾನು ಮತ್ತು ಎಲ್ಲಾ ನಿಮ್ಮ ಸಮುದಾಯ ಜನಾಂಗದವರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಾಸಕರ ಜೊತೆ ಚರ್ಚಿಸಿ ಒಂದು ಜಾಗವನ್ನು ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು.
ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ತೆಲುಗು ಶೆಟ್ಟರ ಸರ್ಕಾರಿ ನೌಕರರ ಉಪಾಧ್ಯಕ್ಷ ಹಾಗೂ ಬಿ, ಆರ್, ಸಿ, ರಂಗಸ್ವಾಮಿ ಶೆಟ್ಟಿ ರವರು ಮಾತನಾಡಿ ನಮ್ಮ ಮಕ್ಕಳಿಗೆ ಯಾವ ಆಸ್ತಿಯೂ ಬೇಕಾಗಿಲ್ಲ ಶಿಕ್ಷಣದ ಆಸ್ತಿ ಅತಿ ಮುಖ್ಯ ಶಿಕ್ಷಣದ ಆಸ್ತಿ ಇದ್ದರೆ ಆ ವ್ಯಕ್ತಿಗೆ ಆ ದೇಶಕ್ಕೆ ಅದೇ ಆಸ್ತಿ ಆದ್ದರಿಂದ ಎಲ್ಲಾ ನಮ್ಮ ಜನಾಂಗದ ದವರು ಮಕ್ಕಳಿಗೆ ಹೆಚ್ಚು ಶಿಕ್ಷಣ ಕೊಡಿಸುವ ಮುಖಾಂತರ ಎಲ್ಲರೂ ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ವಹಿಸಿ ಮಾತನಾಡಿದ 24 ಮನೆ ತೆಲುಗು ಶೆಟ್ಟರ ತಾಲೂಕು ಅಧ್ಯಕ್ಷ ಮಂಜುನಾಥ್ ರವರು ಮಾತನಾಡಿ, ನಮ್ಮ ಜನಾಂಗದಲ್ಲಿ ಸಣ್ಣ ಮತ್ತು ದೊಡ್ಡ ವ್ಯಾಪಾರಸ್ಥರು ಇದ್ದು ಅವರು ಅವರ ವ್ಯಾಪಾರಕ್ಕಾಗಿ ಬೇರೆಬೇರೆ ಕಡೆ ಹೋಗಿರುತ್ತಾರೆ ಆದರೆ ನನಗೆ ನಮ್ಮ ಜನಾಂಗದ ಅಧ್ಯಕ್ಷನಾಗಿ ಸ್ಥಾನವನ್ನು ನೀಡಿದ್ದೀರಿ ಮುಂದೆ ಇಲ್ಲಿರುವ ಸ್ಥಳೀಯರನ್ನು ಉಪಯೋಗಿಸಿಕೊಂಡು ನಮ್ಮ ಜನಾಂಗದ ಒಳಿತಿಗಾಗಿ ತಾಲೂಕಿನ ಶಾಸಕರು ಮತ್ತು ಅಧಿಕಾರಿಗಳ ಜೊತೆಗೂಡಿ ಸಮುದಾಯ ಭವನ ನಿರ್ಮಿಸಿಕೊಳ್ಳಲು ಸತತ ಪ್ರಯತ್ನ ಮಾಡಿ ಸಮುದಾಯ ಭವನಕ್ಕೆ ಜಾಗವನ್ನು ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ,ಶೇಖರ್, ಶಿವಪ್ಪ ಶೆಟ್ಟಿ, ಸುಂದರಪ್ಪ ,ಜನಾರ್ದನಶೆಟ್ಟಿ, ಶಿವಪ್ಪ ,ಭಾಸ್ಕರಾ, ಮೃತುಂಜಯ ,ವೀರಭದ್ರ ಶೆಟ್ಟಿ, ಜಗದೀಶ್, ಗಣೇಶ್, ಮುರಳಿ ಕೃಷ್ಣ ,ಮಹದೇವ ಶೆಟ್ಟಿ ,ಮಂಜು, ಮಂಚಶೆಟ್ಟಿ ,ಮುಂತಾದವರು ಹಾಜರಿದ್ದರು.