ಎಚ್‍ಡಿ ಕೋಟೆ: ಮನೆಯ ಸಂಪ್ ನಲ್ಲಿದ್ದ ಮೋಟರ್ ಗೆ ವಿದ್ಯುತ್ ಸಂಪರ್ಕ ಕೊಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ 21 ವರ್ಷದ ಯುವಕ ಸಾವಿಗೀಡಾಗಿರುವ ಘಟನೆ ಎಚ್‍ಡಿ ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗುರುಸ್ವಾಮಿ ಮತ್ತು ದೇವಮಣಿ ದಂಪತಿಗಳ ಪುತ್ರ ರವೀಶ್ ಎಂಬಾತನೆ, ಸಾವಿಗೀಡಾದ ಮೃತ ದುರ್ದೈವಿಯಾಗಿದ್ದಾನೆ.
ಜೀವನಕ್ಕಾಗಿ ಮೃತ ರವೀಶ್ ಗೂಡ್ಸ್ ಆಟೋ ಓಡಿಸುತ್ತಿದ್ದು ಹೆತ್ತವರು ಕೂಡ ಈತನನ್ನೇ ನಂಬಿಕೊಂಡಿದ್ಧು, ಹೊಸ ಮನೆ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಮೋಟಾರ್ ಆನ್ ಮಾಡುವಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕೂಡಲೆ ಸ್ಥಳೀಯರು ಎಚ್ ಡಿ ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸರಾದರೂ ಅದಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ನಂತರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಎದೆಯೆತ್ತರ ಬೆಳೆದ ಮಗನನ್ನು ಕಳೆದುಕೊಂಡ ಪೋಷಕರು ದಿಕ್ಕು ತೋಚದೆ ಕಣ್ಣೀರಿಡುತ್ತಿದ್ದರೆ ಇತ್ತ ಸಂಬಂಧಿಕರು ಮತ್ತು ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.