ವರದಿ: ಎಡತೊರೆ ಮಹೇಶ್
ಎಚ್.ಡಿ.ಕೋಟೆ: ಸ್ವಾತಂತ್ರ್ಯ ಪೂರ್ವದಿಂದ 21ನೇ ಶತಮಾನದವರೆಗೂ ಬಸ್ ಸೌಲಭ್ಯದಿಂದ ವಂಚಿತವಾಗಿದ್ದ ತಾಲೂಕಿನ ಅಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಉದ್ಬೂರು ಕಾಲೋನಿ ಗ್ರಾಮಕ್ಕೆ ಗುರುವಾರದಿಂದ ಬಸ್ ಸಂಚಾರ ಆರಂಭವಾಗಿದೆ.
ಬೆಳಗ್ಗೆ 8 ಗಂಟೆಗೆ ಉದ್ಬೂರು ಕಾಲೋನಿಯಿಂದ ಹೆಚ್.ಡಿ.ಕೋಟೆಗೆ ಪ್ರಯಾಣ ಆರಂಭಿಸುವ ಬಸ್ ಸಂಜೆ 4:30ಕ್ಕೆ ಹೆಚ್.ಡಿ.ಕೋಟೆಯಿಂದ ಉದ್ಬೂರು ಕಾಲೋನಿ ತಲುಪಲಿದೆ.
ಉದ್ಬೂರು ಕಾಲೋನಿ ಗ್ರಾಮದಿಂದ ಹೆಚ್.ಡಿ.ಕೋಟೆ ಪಟ್ಟಣಕ್ಕೆ ದಿನ ನಿತ್ಯ ಜನರು ತಮ್ಮ ಕೆಲಸ ಕಾರ್ಯಗಳಿಗೆ ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಮೈಸೂರು, ಹುಣಸೂರು ನಗರಗಳಿಗೆ ತೆರಳುವವರು ಸುಮಾರು 3 ಕಿ.ಮೀ ದೂರದ ಕೆ.ಎಡತೊರೆ ಹಾಗೂ ಅಣ್ಣೂರು ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ತೆರಳಿ, ಅಲ್ಲಿಂದ ತೆರಳಬೇಕಿತ್ತು.

ಗ್ರಾಮದ ಮುಖಂಡರು, ಹಿರಿಯರು, ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳ ಹಿಂದೆ ಶಾಸಕರಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂಧಿಸಿ ಬಸ್ ಸೌಲಭ್ಯ ಒದಗಿಸಿದ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಕೆಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ವಿದ್ಯಾರ್ಥಿಗಳು, ಗ್ರಾಮದ ಜನತೆ ಕೃತಜ್ಞತೆ ಸಲ್ಲಿಸಿದರು.
ವಿದ್ಯಾರ್ಥಿನಿ ಅರ್ಚನಾ ಮಾತನಾಡಿ, ನಮ್ಮ ಪೂರ್ವಜರ ಕಾಲದಿಂದಲೂ ನಮ್ಮೂರಿಗೆ ಬಸ್ ವ್ಯವಸ್ಥೆ ಇರಲಿಲ್ಲ. ಇದರಿಂದ ಶಾಲಾ, ಕಾಲೇಜಿಗೆ ತಡವಾಗಿ ಹೋಗುವ ಹಾಗೂ ವಿಶೇಷ ತರಗತಿಗಳು ಇದ್ದಾಗ ತಡವಾಗಿ ಮನೆಗೆ ಆಗಮಿಸುವ ಸನ್ನಿವೇಶ ಸೃಷ್ಟಿಯಾಗುತ್ತಿತ್ತು. ಇಂದಿನಿಂದ ಬಸ್ ಸೌಲಭ್ಯ ಒದಗಿಸಿರುವುದರಿಂದ ಇವೆಲ್ಲಾ ಸಮಸ್ಯೆಗಳು ದೂರವಾಗಲಿವೆ ಎಂದು ಸಂತೋಷ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಜಯಲಕ್ಷ್ಮಿ ಚೌಡನಾಯ್ಕ ಹಸಿರು ನಿಸಾನೆ ತೋರಿಸಿದರು.
ಗ್ರಾಮದ ಮುಖಂಡರಾದ ಯಜಮಾನರುಗಳಾದ ನಾಯಕ ವೆಂಕಟೇಶ,,ವೆಂಕಟ ರಾಮ ನಾಯ್ಕ, ಹರೀಶ , ಘಟಕ ವ್ಯವಸ್ಥಾಪಕ ಬೋಗ ನಾಯ್ಕ ವಿದ್ಯಾರ್ಥಿಗಳಾದ ಭಾರತಿ , ರಾಕಿ ಸೇರಿದಂತೆ ಸುಮಾರು 42 ಶಾಲಾ ವಿದ್ಯಾರ್ಥಿಗಳು ಇದ್ದರು.