ವರದಿ: ಎಡತೊರೆ ಮಹೇಶ್
ಹೆಚ್ ಡಿ ಕೋಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಮೈಸೂರು, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹೆಚ್ ಡಿ ಕೋಟೆ ತಾಲೂಕು ಗೋಳೂರು ಹಾಡಿ, ಆನೆಮಾಳ ಹಾಡಿ ಮತ್ತು ಮಾನಿ ಮೂಲೆ ಹಾಡಿ ಯಲ್ಲಿ ಉಚಿತ ವಿಶೇಷ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯ ಕ್ರಮದಲ್ಲಿ ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿಗಳಾದ ಡಾ.ಬೃಂದಾ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ರವಿಕುಮಾರ್ ಟಿ. ರವರು ಅಧ್ಯಕ್ಷತೆಯನ್ನು ವಹಿಸಿ, ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ರವಿಕುಮಾರ್ ರವರು ಮಾತನಾಡಿ , ಇಂದು ಹಾಡಿ ಜನರಿಗೆ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಮತ್ತು ಹಾಡಿಯ ಜನರಿಗೆ ಹೆಚ್ಚು ಆರೋಗ್ಯ ಸೌಲಭ್ಯವನ್ನು ನೀಡುವ ಉದ್ದೇಶದಿಂದ ಜಿಲ್ಲಾ ಮಟ್ಟದಿಂದ ಮಕ್ಕಳ ತಜ್ಞರು, ಚರ್ಮರೋಗ ತಜ್ಞರು , ಮನೋರೋಗ ತಜ್ಞರನ್ನು ಹಾಗೂ ಸಾಮಾನ್ಯ ವೈದ್ಯರನ್ನು ನಿಯೋಜಿಸಿ ಶಿಬಿರವನ್ನು ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಎಚ್ ಡಿ ಕೋಟೆ ತಾಲೂಕಿನ ಉಳಿದ ಎಲ್ಲಾ ಹಾಡಿಗಳಲ್ಲೂ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಂಡು ಹಾಡಿ ಜನರಿಗೆ ಆರೋಗ್ಯ ತಪಾಸಣೆ ಮಾಡುತ್ತೇವೆ. ಹಾಡಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಈ ತಪಾಸಣೆ ಶಿಬಿರದಲ್ಲಿ ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಧಿಕಾರಿಗಳಾದ ಡಾ. ಬೃಂದಾ. ರವರು ಮಾತನಾಡಿ ,ಜಿಲ್ಲಾ ಮಟ್ಟದಿಂದ ಚರ್ಮ ರೋಗ ತಜ್ಞರು, ಮಕ್ಕಳ ತಜ್ಞರು, ಮನೋರೋಗ ತಜ್ಞರು, ಸಾಮಾನ್ಯ ವೈದ್ಯರು,ಗಳನ್ನು ನಿಮ್ಮ ಗ್ರಾಮಕ್ಕೆ ಕರೆ ತಂದಿರುವುದು ಏಕೆಂದರೆ ನೀವು ಯಾವುದೇ ರೋಗಗಳನ್ನು ತಪಾಸಣೆ ಮಾಡಿಸಿಕೊಳ್ಳಬೇಕಾದರೆ ತಾಲ್ಲೂಕು ಮಟ್ಟದ ಆರೋಗ್ಯ ಕೇಂದ್ರಕ್ಕೆ,ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆ ಗೆ ಹೋಗಬೇಕಾಗುತ್ತದೆ. ಆ ದೃಷ್ಟಿಯಿಂದ ಈ ದಿನ ನಿಮ್ಮ ಹಾಡಿಗೆ ತಜ್ಞೆ ವೈದ್ಯರುಗಳನ್ನೂ ಕರೆದುಕೊಂಡು ಬಂದಿದ್ದೇವೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಪಾಸಣೆ ಮಾಡಿಸಿಕೊಳ್ಳಿ ಎಂದು ತಿಳಿಸಿದರು.
ಗೋಳೂರು ಹಾಡಿಯಲ್ಲಿ ನಡೆದ ತಪಾಸಣೆ ಶಿಬಿರದಲ್ಲಿ 150 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಆರೋಗ್ಯ ತಪಾಸಣೆ ಮಾಡಿಸಿ ಶಿಬಿರದ ಉಪಯೋಗ ಪಡೆದು ಕೊಂಡರು.
ಅದರಲ್ಲಿ 6 ಜನ ವಿಶೇಷ ಚೇತನರು ಕೂಡ ತಪಾಸಣೆ ಮಾಡಿಸಿಕೊಂಡರು. ಬಿ.ಪಿ,ಶುಗರ್ ಹಾಗೂ ತಪಾಸಣೆ ಮಾಡಿಸಿ ಕೊಂಡವರಿಗೆ ಅಲ್ಲೆ ಔಷಧಿಗಳನ್ನು ವಿತರಣೆ ಮಾಡಿದ್ದರು.
ಈ ಶಿಬಿರದಲ್ಲಿ ವೈದ್ಯಾಧಿಕಾರಿಗಳಾದ ಡಾ ಹರ್ಷ, ಮತ್ತು ತಾಲೂಕು ಪರಿಶಿಷ್ಟ ವರ್ಗಗಳ ಅಧಿಕಾರಿಗಳಾದ ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರಯ್ಯ, ಜಿಲ್ಲಾ ಮಟ್ಟದ ತಜ್ಞ ವೈದ್ಯರುಗಳು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು,ಸ್ವಾಮಿ ವಿವೇಕಾನಂದ ಯೂತ್ ಮೊಮೆಂಟ್, ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇನ್ನಿತರರು ಹಾಜರಿದ್ದರು.