Wednesday, April 9, 2025
Google search engine

Homeಅಪರಾಧಹೆಚ್.ಡಿ ಕೋಟೆ: ಪೆಟ್ರೋಲ್‌ ಸುರಿದು ಪತ್ನಿಗೆ ಬೆಂಕಿ ಹಚ್ಚಿದ ಪತಿ

ಹೆಚ್.ಡಿ ಕೋಟೆ: ಪೆಟ್ರೋಲ್‌ ಸುರಿದು ಪತ್ನಿಗೆ ಬೆಂಕಿ ಹಚ್ಚಿದ ಪತಿ

ಹೆಚ್.ಡಿ ಕೋಟೆ: ಹೆಚ್.ಡಿ ಕೋಟೆಯ ಹನುಮಂತ ನಗರದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪತಿಯ ಕ್ರೌರ್ಯದಿಂದ ನಲುಗಿದ ಮಹಿಳೆ ಮಧುರ. ಆಕೆಯ ಗಂಡ ಮಲ್ಲೇಶ್ ನಾಯ್ಕ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದಾತ.

ಮಹಿಳೆಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವಿನ ಹೋರಾಟ ಮಾಡುತ್ತಿದ್ದಾರೆ. ಮಲ್ಲೇಶ್ ನಾಯ್ಕ್ ವಿಜಯನಗರದ ಕೂಡ್ಲಗಿ ತಾಲೂಕಿನ ಬಿಬಿ ತಾಂಡದವನು. 8 ವರ್ಷಗಳ ಹಿಂದೆ ಅದೇ ಗ್ರಾಮದ ಮಧುರಳನ್ನ ವಿವಾಹವಾಗಿ ಹೆಚ್.ಡಿ ಕೋಟೆಯ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ.

ಆರೇಳು ವರ್ಷಗಳಿಂದ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುವ ಜೊತೆಗೆ ಅನುಮಾನದಿಂದ ನೋಡುತ್ತಿದ್ದ. ಪ್ರತಿ ದಿನ ಕುಡಿದು ಬಂದು ತವರು ಮನೆಯಿಂದ ಸೈಟ್ ಕೊಡಿಸುವಂತೆ ಗಲಾಟೆ ಮಾಡುತ್ತಿದ್ದ. ಈ ನಡುವೆ ಕೆಲವು ದಿನಗಳ ಹಿಂದೆ ಒಂದೆರೆಡು ದಿನಗಳ ಮಟ್ಟಿಗೆ ಮಧುರ ತವರು ಮನೆಗೆ ಹೋಗಿದ್ದರು. ಈ ವಿಚಾರವನ್ನೇ ಮುಂದಿಟ್ಟುಕೊಂಡು ಪತ್ನಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular