Friday, April 18, 2025
Google search engine

Homeರಾಜ್ಯಸುದ್ದಿಜಾಲಹೆಚ್.ಡಿ.ಕೋಟೆ:ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟನೆ

ಹೆಚ್.ಡಿ.ಕೋಟೆ:ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟನೆ

ವರದಿ :ಎಡತೊರ ಮಹೇಶ್

ಹೆಚ್.ಡಿ.ಕೋಟೆ: ಹೆಚ್.ಡಿ.ಕೋಟೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ , ಸಾರ್ವಜನಿಕ ಆಸ್ಪತ್ರೆ, ವತಿಯಿಂದ ಹಾಗೂ ರೋಟರಿ ಸಂಸ್ಥೆ ಹೆಚ್.ಡಿ.ಕೋಟೆ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯ ಕ್ರಮದ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಕಾರ್ಯ ಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ರವಿಕುಮಾರ್ ,ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಸೋಮಣ್ಣ ರವರು , ಹಾಗೂ ರೋಟರಿ ಸಂಸ್ಥೆ ಯ ಅಧ್ಯಕ್ಷರಾದ ಬಿ.ಜಿ.ಗಂಗಾಧರ್ ರವರು ಅಧ್ಯಕ್ಷತೆಯನ್ನು ವಹಿಸಿ ದೀಪ ಬೆಳಗುವುದರ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಿದರು.

ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ದಿನಾಂಕ 03.03.2024 ರಂದು ರಾಜ್ಯದ್ಯಂತ ನಡೆಸುತ್ತಿದ್ದು ಅದರಂತೆ ತಾಲೂಕು ಆಡಳಿತ ಹೆಚ್. ಡಿ. ಕೋಟೆ ನಡೆಸುತ್ತಿದ್ದು,1995 ರಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಪ್ರಾರಂಭಿಸಿ ಇಂದಿನವರೆಗೆ 0-5 ವರ್ಷದ ಬಳಗಿನ ಎಲ್ಲಾ ಮಕ್ಕಳಿಗೂ ಲಸಿಕೆ ನೀಡುತ್ತಾ ಬಂದಿದ್ದೇವೆ. ಇದರ ಪರಿಣಾಮ 2014ರಲ್ಲಿ ಭಾರತ ಸರ್ಕಾರ ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಣೆಯಾಗಿರುವುದು.

ಇಂದಿನ ಕಾರ್ಯಕ್ರಮಕ್ಕೆ ಹೆಚ್. ಡಿ. ಕೋಟೆ ತಾಲೂಕಿನಲ್ಲಿ
ಒಟ್ಟು ಜನ ಸಂಖ್ಯೆ: 189531
ಒಟ್ಟು ಮನೆಗಳ ಸಂಖ್ಯೆ: 43682
0-5 ವರ್ಷದ ಒಟ್ಟು ಮಕ್ಕಳ ಸಂಖ್ಯೆ: 13503
ಒಟ್ಟು ಪೋಲಿಯೋ ಬೂತ್ ಸಂಖ್ಯೆ: 132
ಒಟ್ಟು ತಂಡದಲ್ಲಿ ಕರ್ತವ್ಯ ನಿರ್ವಹಿಸುವವರ ಸಂಖ್ಯೆ: 528
ಒಟ್ಟು ಮೇಲ್ವಿಚಾರಕರ ಸಂಖ್ಯೆ:26

ಟ್ರಾನ್ಸಿಟ್ ಬೂತ್ :1( KSRTC ಬಸ್ ಸ್ಟ್ಯಾಂಡ್)ವ್ಯವಸ್ಥೆ ಮಾಡಿದ್ದು 0 ಇಂದ 5 ವರ್ಷದ ಎಲ್ಲಾ ಮಕ್ಕಳಿಗೂ ಮೊದಲನೇ ದಿನ ಶೇಕಡಾ 100ಕ್ಕೆ 100ರಷ್ಟು ಪೋಲಿಯೋ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ.ಹಾಗೂ
ಅಲೆಮಾರಿಗಳು ಹಾಗೂ ಹಾಡಿಗಳಲ್ಲಿಯೂ ಪೂರ್ಣ ಪ್ರಮಾಣದ ಪೋಲಿಯೋ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಒಂದು ಮೊಬೈಲ್ ಯೂನಿಟ್ ಅನ್ನು ಮಾಡಲಾಗಿದೆ ,ಕಳೆದ 2022 ಸಾಲಿನಲ್ಲಿ ಶೇಕಡ 103 ರಷ್ಟು ಗುರಿ ಸಾಧಿಸಲಾಗಿದ್ದು ಈ ವರ್ಷ ಅದೇ ರೀತಿ ಪೋಲಿಯೋ ಲಸಿಕೆ ನೀಡಿ , ಗುರಿ ಸಾಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು . ಈ ಕಾರ್ಯಕ್ರಮದಲ್ಲಿ ಕಿವಿ ಮೂಗು ತಜ್ಞರಾದ ಡಾ” ದಿನಕರ್ ,ರೋಟರಿ ಸಂಸ್ಥೆಯ ಕಾರ್ಯದರ್ಶಿ ಸ್ವಾಮಿ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ಮಕ್ಕಳು, ತಾಯಂದಿರು, ಹಾಜರಿದ್ದರು.

RELATED ARTICLES
- Advertisment -
Google search engine

Most Popular