ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ : ಇಂದಿರಾಗಾಂಧಿ ಸೋನಿಯಾಗಾಂದಿ ಅವರು ಕುಳಿತಿರುವ ಕುರ್ಚಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿರುವುದು ನಮ್ಮೆಲ್ಲರ ಪುಣ್ಯ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ 84 ನೇ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ಅವರ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಅದ್ದೂರಿಯಾಗಿ ಆಚರಣೆ ಮಾಡಿ ವಿವಿಧ ಸಮಾಜಸೇವೆ ಮಾಡುವ ಮುಖಾಂತರ ಬೆಳಿಗ್ಗೆಯಿಂದ ಆರೋಗ್ಯ ತಪಾಸಣೆ ಶಿಬಿರ ಬಡ ಕುಟುಂಬಗಳಿಗೆ ಆಹಾರ ಕಿಟ್ ಸಾಧಕರಿಗೆ ಸನ್ಮಾನ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ ಸಾಮಾನ್ಯ ಕಾರ್ಯಕರ್ತರಾಗಿ ದೇಶದ ಚುಕ್ಕಾಣಿ ಹಿಡಿಯಲು ಸಾಧ್ಯವಾಗುತ್ತದೆ ಎಂದರೆ ಖರ್ಗೆ ಸಾಹೇಬರೇ ಉದಾಹರಣೆ ಒಂದೇ ಪಕ್ಷದಲ್ಲಿದ್ದು ಪಕ್ಷದ ನಿಷ್ಠೆ ತೋರಿಸಿದ್ದಕ್ಕೆ ಒಳ್ಳೆಯ ಅವಕಾಶ ಸಿಕ್ಕಿದೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಇನ್ನು 15 ಜನ ಸಂಸದರು ಹೆಚ್ಚಿಗೆ ಗೆದ್ದಿದ್ದರೆ ಈ ದೇಶದ ಪ್ರಧಾನಿಯಾಗುವ ಅವಕಾಶಗಳು ಅವರಿಗೆ ಇತ್ತು ಮುಂದಿನ ಬಾರಿ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ದೇಶದ ಪ್ರಧಾನಿಯಾಗುತ್ತಾರೆ ಈ ಹುಟ್ಟು ಹಬ್ಬದಿದ ನಾವೆಲ್ಲರೂ ಅವರಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕು ಸುರೇಶ್ ರವರು ಈ ಹುಟ್ಟು ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಮಾಡಿದ್ದಾರೆ ಅವರಿಗೆ ಮತ್ತು ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ನಂತರ ಮಾಜಿ ಶಾಸಕರ ಪುತ್ರ ಎಚ್, ಸಿ, ಮಂಜುನಾಥ್ ಮಾತನಾಡಿ ಹಳ್ಳಿಯಿಂದ ದಿಲ್ಲಿಯವರೆಗೂ ಸಂಭ್ರಮದಿಂದ ಖರ್ಗೆ ಸಾಹೇಬರ ಹುಟ್ಟುಹಬ್ಬವನ್ನು ಈ ದಿನ ಆಚರಣೆ ಮಾಡುತ್ತಿದ್ದಾರೆ ಅವರು ಯಾವತ್ತು ಕೂಡ ಒಂದು ಜಾತಿಗೆ ನಾಯಕರಾದವರಲ್ಲ ಅವರು ಈ ದೇಶದ ಒಬ್ಬ ರಾಜಕೀಯ ಅತ್ಯುತ್ತಮ ಪಟ್ಟು ಅವರು ತುಂಬಾ ಕಷ್ಟಪಟ್ಟು ಈ ಎತ್ತರಕ್ಕೆ ಬಂದಿದ್ದಾರೆ ಅದನ್ನು ಗುರುತಿಸಿ ಪಕ್ಷದಲ್ಲಿ ಅವರಿಗೆ ಹಲವು ಹುದ್ದೆಗಳು ಸಹ ಒಲಿದು ಬಂತು ಎಂದು ತಿಳಿಸಿದರು.
ಮಲ್ಲಿಕಾರ್ಜುನ್ ಖರ್ಗೆ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಜಿಯಾರ ಸುರೇಶ್ ಮಾತನಾಡಿ
ತಾಲೂಕಿನಲ್ಲಿ ಹಲವು ವರ್ಷಗಳಿಂದ ಸಾಹೇಬ್ರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು ಈ ಬಾರಿ ಶಾಸಕರನ್ನು ಭೇಟಿ ಮಾಡಿದಾಗ ಈ ಕಾರ್ಯಕ್ರಮವನ್ನು ಚೆನ್ನಾಗಿ ಮಾಡಿ ಸಹಕಾರ ಕೊಡುತ್ತೇನೆ ಎಂದರು ಅದರಂತೆ ಎಲ್ಲರೂ ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷಾ, ಮಾದಪ್ಪ, ಎಚ್, ಸಿ, ಮಂಜುನಾಥ್, ಪರಶುವಮೂರ್ತಿ, ನಾಗನಹಳ್ಳಿ ಪ್ರದೀಪ್, ಸತೀಶ್ ಗೌಡ, ಮುದ್ದು ಮಲ್ಲಯ್ಯ, ಚಾಮರಾಜ್, ಜೀವಿಕಾ ಬಸುರಾಜ್, ಭಾಗ್ಯಲಕ್ಷ್ಮಿ ನಿಂಗರಾಜ್, ಸೌಮ್ಯ ಮಂಜುನಾಥ್, ಜಿನ್ನಳ್ಳಿ ರಾಜು, ಶಿವಪ್ಪ ಕೋಟೆ, ಅಜರ್, ಶಿವರಾಜ್, ಗುರುಸ್ವಾಮಿ, ನಜೀರ್ ಅಹ್ಮದ್,ರಾಜು ವಿಶ್ವಕರ್ಮ, ನಯಾಜ್, ಮಾರ್ಕಂಡಯ್ಯ, ಮಲ್ಲೇಶ್, ಜಯಪ್ರಕಾಶ್, ಶ್ರೀಕಂಠ, ವನಸಿರಿ ಉಮೇಶ್, ಶಂಕರ್, ವೆಂಕಿ, ಶಶಿ ಪಟೇಲ್, ರವಿ ನೆನಪು, ರೆಹಮಾನ್, ಹಾಗೂ ಇನ್ನಿತರರು ಇದ್ದರು.