Sunday, April 20, 2025
Google search engine

Homeಅಪರಾಧಎಚ್ ಡಿ ಕೋಟೆ: ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದ ದರೋಡೆಕೋರರ ಬಂಧನ

ಎಚ್ ಡಿ ಕೋಟೆ: ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದ ದರೋಡೆಕೋರರ ಬಂಧನ

ವರದಿ ಎಡತೊರೆ ಮಹೇಶ್

ಎಚ್ ಡಿ ಕೋಟೆ: ರಾತ್ರಿ ವೇಳೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದ ದರೋಡೆಕಾರರನ್ನು ಎಚ್ ಡಿ ಕೋಟೆ ಪೊಲೀಸರು ಬಂಧಿಸಿದ್ದಾರೆ.

ಜನವರಿ 25 ರಂದು ರಾತ್ರಿ ಸುಮಾರು10.30 ಗಂಟೆಯಲ್ಲಿ ಎಚ್ ಡಿ ಕೋಟೆ ತಾಲೂಕು ಮೈಸೂರು ಮಾನಂದವಾಡಿ ಮುಖ್ಯ ರಸ್ತೆಯಲ್ಲಿರುವ ಕೊಳಗಾಲ ಗೇಟಿನ ಹತ್ತಿರ 04 ಅಪರಿಚಿತರು ಹುಡುಗರು ಕೇರಳ ನೋಂದಣಿ ಇರುವ ವಿನೋದ್ ಎಂಬುವವರ KL- 73-D-8018 ಸಂಖ್ಯೆಯ ಬೊಲೆರೋ ಪಿಕಪ್ ವಾಹನವನ್ನು ಅಡ್ಡಗಟ್ಟಿ ದೊಣ್ಣೆ ಕಲ್ಲುಗಳನ್ನು ಹಿಡಿದು ಹೆದರಿಸಿ 1000 ರೂ ನಗದು ಹಣವನ್ನು ಕಿತ್ತುಕೊಂಡಿದ್ದು 100 ರೂ ಹಣವನ್ನು   ಫೋನ್ ಪೇ ಮಾಡಿಸಿಕೊಂಡಿದ್ದು, ನಂತರ ಕೈಗಳಿಂದ ಹಲ್ಲೆ ಮಾಡಿದ  ಕುರಿತು ವಿನೋದ್ ರವರು ನೀಡಿದ ದೂರಿನ ಮೇರೆಗೆ ಠಾಣಾ ಸಂಖ್ಯೆ 35/2024 ಕಲಂ 392 ಐಪಿಸಿ ರಿತ್ಯಾ ಪ್ರಕರಣ ದಾಖಲಾಗಿತ್ತು.

ಘಟನೆ ನಡೆದ ದಿನ ರಸ್ತೆಯಲ್ಲಿ ಸಂಚಾರಿಸುವ ಯಾರೋ  ವಿಡಿಯೋ ಮಾಡಿ ಕಂಟ್ರೋಲ್ ರೂಮ್ ಹಾಗೂ 112 ಗೆ ಕರೆ ಮಾಡಿ ತಿಳಿಸಿದ್ದರಿಂದ ಕೂಡಲೇ ಸ್ಥಳಕ್ಕೆ ಹಂಪಾಪುರ ಉಪ ಠಾಣೆಯ  ಸಿಬ್ಬಂದಿಗಳು ಹಾಗೂ 112  ವಾಹನದ ಸಿಬ್ಬಂದಿಗಳು ಸ್ಥಳಕ್ಕೆ ಹೋಗಿ ನೋಡಿದಾಗ ಆರೋಪಿಗಳು ಪರಾರಿಯಾಗಿದ್ದರು.

ನಂತರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಧಿಕ್ಷಕರಾದ ಸೀಮಾ ಲಟ್ಕರ್ ರವರು ಆರೋಪಿ ಪತ್ತೆ ಬಗ್ಗೆ ತಂಡವನ್ನು ರಚನೆ ಮಾಡಿದ್ದು, ಅಪರ ಅಧಿಕ್ಷಕರಾದ ನಂದಿನಿ ಬಿಎಸ್ ಹಾಗೂ ಅಪರ  ಅದಿಕ್ಷಕರಾದ ಮೊಹಮ್ಮದ್ ಬಾಬು,  ಹುಣಸೂರು ಉಪ ವಿಭಾಗದ ಉಪ ಅಧೀಕ್ಷಕರಾದ  ಗೋಪಾಲಕೃಷ್ಣರವರ ನೇತೃತ್ವದಲ್ಲಿ ಎಚ್ ಡಿ ಕೋಟೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶಬ್ಬೀರ್ ಹುಸೇನ್, ಆರೋಪಿಗಳ  ಪತ್ತೆ ಬಗ್ಗೆ ಠಾಣಾ ಪಿ ಸಿ 320 ಸೈಯದ್ ಕಬೀರ್ ಉದ್ದಿನ್  ಮತ್ತು ಠಾಣಾ ಪಿ ಸಿ 434 ಮೋಹನ್ ಎಚ್ ಎಸ್  ರವರನ್ನು ನೇಮಕ ಮಾಡಲಾಗಿತ್ತು.

ಸದರಿಯವರು ಫೋನ್ ಪೇ ಮಾಡಿಸಿಕೊಂಡಿದ್ದ ಆರೋಪಿಗಳ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ ಮಾಹಿತಿ ಕಲೆ ಜನವರಿ 30 ರಂದು ಮಾದಾಪುರ ಗ್ರಾಮದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಪಿಎಸ್ ಐ ಸುರೇಶ್ ನಾಯಕ ರವರು ತನಿಖೆ ಕೈಗೊಂಡು ಆರೋಪಿಗಳನ್ನು ಕುಲಂಕುಶವಾಗಿ ವಿಚಾರ ಮಾಡಿದಾರ ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ಆರೋಪಿಗಳಿಂದ 500 ನಗದು ಕೃತ್ಯಕ್ಕೆ ಉಪಯೋಗಿಸಿದ ಹಣ ಎರಡು ಮೊಬೈಲ್ ಗಳನ್ನು ಅಮಾನತು  ಪಡಿಸಿಕೊಂಡಿದ್ದು, ಆರೋಪಿಗಳನ್ನು ಘನ ನ್ಯಾಯಾಲಯಕ್ಕೆ  ಹಾಜರುಪಡಿಸಿದ್ದು ಆರೋಪಿಗಳು ನ್ಯಾಯಾಲಯದ ಬಂಧನದಲ್ಲಿರುತ್ತಾರೆ.

ಇನ್ನುಳಿದ ಆರೋಪಿಗಳು ತಲೆಮರಿಸಿಕೊಂಡಿರುತ್ತಾರೆ, ಈ ಆರೋಪಿಗಳು ರೂಡಿಗತ ಆರೋಪಿಗಳಾಗಿದ್ದು ಆಗಾಗ ಇದೇ ರೀತಿ ಕೃತ್ಯವನ್ನು ಮಾಡುತ್ತಿದ್ದು ಯಾರು ಸಹ ದೂರು ನೀಡಿರಲಿಲ್ಲ, ಇದನ್ನ ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ಪಿಎಸ್ಐ ಸುರೇಶ್ ನಾಯಕ್ ಮತ್ತು ಹೆಚ್ ಸಿ ಜಗದೀಶ್ ರವರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಜಗದೀಶ್, ಸೈಯದ್ ಕಬಿರುದ್ದೀನ್,  ಮೋಹನ್,  ರಿತೀಶ್, ಕಿರಣ್ , ಆನಂದ್ ಮೂರ್ತಿ, ಯೋಗೇಶ್, ಮಾದೇವಸ್ವಾಮಿ  , ಆನಂದ್ ಭಾಗವಹಿಸಿದ್ದರು.

ಇಂಥ ಪ್ರಕರಣಗಳು ನಡೆದ ಸಂದರ್ಭದಲ್ಲಿ ತಕ್ಷಣ ಪೊಲೀಸ್ ಠಾಣೆಗೆ  ದೂರು ನೀಡುವಂತೆ ಸಾರ್ವಜನಿಕರಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಸಬಿರ್ ಹುಸೇನ್ ರವರು ಮನವಿ ಮಾಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular