ಎಡತೊರೆ ಮಹೇಶ್
ಎಚ್.ಡಿ.ಕೋಟೆ:ಇಂದು ತಾಲೋಕು ಆಡಳಿತ ಸೌಧದಲ್ಲಿ ತಹಶೀಲ್ದಾರ್ ಶ್ರೀನಿವಾಸ್ ರವರು ಗೋಷ್ಟಿಯನ್ನು ಉದ್ದೇಶಿಸಿ ಮಾತಾನಾಡುತ್ತಾ ಸರ್ಕಾರದ ವತಿಯಿಂದ ಬಡವರಿಗೆ ಮತ್ತು ರೈತರಿಗೆ ಅನುಕೂಲ ವಾಗುವಂತೆ ತಾಲೂಕ ಆಡಳಿತ ವತಿಯಿಂದ ಪೌತಿ ಖಾತೆ ಆಂದೋಲನ ನಡೆಸಲಾಗುತ್ತಿದ್ದು, ಈ ಹಿನ್ನೆಲೆ ನಮ್ಮ ಕಂದಾಯ ಇಲಾಖೆಯ ಅಧಿಕಾರಿಗಳು ಪ್ರತಿ ಗ್ರಾಮಕ್ಕೂ ಭೇಟಿ ನೀಡಲಿದ್ದು ಪೌತಿ ಖಾತೆ ಸಲುವಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಎಚ್ ಡಿ ಕೋಟೆ ತಾಲೂಕಿಗೆ ಸಂಬಂಧಿಸಿದಂತೆ ಪ್ರತಿ ಹಳ್ಳಿಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ಪಡೆಯಲಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಸಾರ್ವಜನಿಕರು ಇಲಾಖೆಗಳಿಗೆ ಬಂದು ತಿಂಗಳಗಟ್ಟಲೆ ಅಲೆದಾಡುವುದು ತಪ್ಪಿಸುವ ದೃಷ್ಟಿಯಿಂದ ಮತ್ತು ಮುಗ್ಧ ಬಡ ರೈತರು ಕೆಲ ದಲ್ಲಾಳಿಗಳ ಕಪಿ ಮುಷ್ಠಿಗೆ ಸಿಲುಕಬಾರದೆಂಬ ಹಿತದೃಷ್ಟಿಯನ್ನು ಇಟ್ಟುಕೊಂಡು ಸರಕಾರ ಈ ಒಳ್ಳೆಯ ಯೋಜನೆಯನ್ನು ತಂದಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.ಗೋಷ್ಟಿಯಲ್ಲಿ ಗ್ರೇಡ್ ೨ ತಹಶಿಲ್ದಾರ ಸಣ್ಣರಾಮಪ್ಪ ಹಾಜರಿದ್ದರು.