ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ತಾಲೂಕಿನ ಅಣ್ಣೂರು ಗ್ರಾಮ ಪಂಚಾಯಿತಿ ಕೆ ಎಡತೊರೆ ಹನುಮಂತನಗರ ಹಾಡಿಯಲ್ಲಿ ಆದಿವಾಸಿಗಳ ಸಮಸ್ಯೆಯನ್ನು ಆಲಿಸಲು ತಾಲೂಕಿನ ನಿಸರ್ಗ ಫೌಂಡೇಶನ್ ಸಂಸ್ಥೆ ಹಾಗೂ ಅಣ್ಣೂರು ಗ್ರಾಮ ಪಂಚಾಯಿತಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆದಿವಾಸಿ ಬುಡಕಟ್ಟು ಮಹಿಳೆಯರು ಮತ್ತು ಪುರುಷರು ಮಾತನಾಡಿ ನಮಗೆ ಅರಣ್ಯ ಹಕ್ಕು ಕಾಯ್ದೆ ಅಡಿ ನಾವು ಜೇನುತುಪ್ಪ , ಗೆಡ್ಡೆ ಗೆಣಸು ತರಲು ನಮಗೆ ಮುಕ್ತವಾದ ಅವಕಾಶವಿದೆ ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮನ್ನು ಕಾಡಿನೊಳಗೆ ಸೇರಿಸುವುದಿಲ್ಲ. ಕಾಯ್ದೆ ಪ್ರಕಾರ ನಮಗೆ ಜಮೀನು ಮಂಜೂರು ಮಾಡಬೇಕು ಮತ್ತು ನಮಗೆ ಸ್ಮಶಾನ ಇಲ್ಲ. ಮತ್ತು ನಮಗೆ ವಾಸಿಸಲು ಮನೆಗಳು ಇಲ್ಲ ಇರುವ ಮನೆಗಳಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿ ಮಾತನಾಡಿದ ಹೆಚ್‍ಡಿ ಕೋಟೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ರಘುನಾಥ್ ರವರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ನಾವೇ ನಿಮ್ಮ ಬಳಿ ಬಂದಿದ್ದು ಈಗಾಗಲೇ ಗ್ರಾಮಕ್ಕೆ ಸಿಸಿ ರಸ್ತೆ, ಕುಡಿಯುವ ನೀರು ಒಳಚರಂಡಿ , ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
ಮುಂದುವರೆದು ನಿಮ್ಮ ಗ್ರಾಮ ಪಂಚಾಯಿತಿ ಸದಸ್ಯರುಗಳು ಶಾಸಕರಾದ ಅನಿಲ್ ಚಿಕ್ಕಮಾದು ಸರ್ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಶಾಸಕರು ಸರ್ಕಾರದಿಂದ ಎಡತೊರೆ ಮುಖ್ಯರಸ್ತೆಯಿಂದ ಇಲ್ಲಿಯವರೆಗೆ ಕೋಟ್ಯಾಂತರ ರೂ ವೆಚ್ಚದಲ್ಲಿ ಡಾoಬರೀಕರಣ ರಸ್ತೆ ಮಂಜೂರಾಗಿದೆ. ಹಾಗೂ ಗ್ರಾಮ ಪಂಚಾಯಿತಿ ಜೆಜೆಎಂ ಮುಖಾಂತರ ವಾಟರ್ ಟ್ಯಾಂಕ್ ಕೂಡ ಮಂಜೂರಾಗಿದೆ. ಉಳಿದಂತೆ ಹಕ್ಕು ಪತ್ರ ಮತ್ತು ಪ್ರತಿಯೊಬ್ಬರಿಗೂ ಭೂಮಿ ಮಂಜೂರು ಮಾಡಿಸಲು ಸರ್ಕಾರದ ಇಲಾಖೆಗಳ ಗಮನಕ್ಕೆ ತರಲಾಗುವುದು ಮತ್ತು ನೀವು ಈಗಾಗಲೇ ನೀಡಿರುವ ಅರ್ಜಿಗಳನ್ನು ಸಂಬಂಧಪಟ್ಟ ಉಪಯುಭಾಗಾಧಿಕಾರಿ ಹುಣಸೂರು ಇವರಿಗೆ ಕಳುಹಿಸಲು ಗ್ರಾಮ ಸಭೆ ಮತ್ತು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ನಂತರ ಪಿಡಿಒ ಸಂತೋಷ್ ನಾಗ್ ಮಾತನಾಡಿ ನಮ್ಮ ಪ್ರತಿಯೊಬ್ಬ ಆದಿವಾಸಿಗಳು ಉದ್ಯೋಗ ಖಾತ್ರಿಯ ಜಾಬ್ ಕಾರ್ಡ್ ಮಾಡಿಸಿಕೊಳ್ಳಬೇಕು ಮತ್ತು ಆಧಾರ್ ಕಾರ್ಡ್ ಕೆ ವೈ ಸಿ ಮಾಡಿಸಿಕೊಳ್ಳಬೇಕು ಇಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ರಘುನಾಥ್ ಪಿಡಿಒ ಸಂತೋಷ್ ನಾಗ್, ಕಾರ್ಯದರ್ಶಿಗಳಾದ ಶಿವರಾಜ್ ಪಂಚಾಯಿತಿ ಸದಸ್ಯರಾದ ಎಸ್ ಮಹೇಶ್,ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಕೆಂಪ, ಕಾಳ, ಪ್ರಸಾದ್, ಸುರೇಶ, ಪಾರ್ವತಿ , ಜಯಮ್ಮ, ಕಾಳಪ್ಪ ಸೇರಿದಂತೆ ಆದಿವಾಸಿಗಳ ಮಹಿಳೆಯರು ಮತ್ತು ಮುಖಂಡರು ಹಾಜರಿದ್ದರು.

ವಿಶೇಷವೇನೆಂದರೆ ಅಧಿಕಾರಿಗಳು ಮತ್ತು ಸದಸ್ಯರುಗಳು ಸಭೆಗೆ ಬರುತ್ತಾರೆ ಎಂದು ಚೇರುಗಳನ್ನು ಹಾಕಿ ತಾವು ಮಾತ್ರ ಕೆಳಗೆ ಕುಳಿತುದ್ದರು. ಇದನ್ನು ಗಮನಿಸಿದ ಉಪಾಧ್ಯಕ್ಷ ಮಹೇಶ್ ಅಲ್ಲಿ ಹಾಕಲಾಗಿದ್ದ ಚೇರುಗಳನ್ನು ತೆಗೆಸಿ ತಾವು ಮತ್ತು ಅಧಿಕಾರಿಗಳು , ಅವರ ಜೊತೆ ನೆಲದ ಮೇಲೆ ಕುಳಿತು ಸುಮಾರು 3 ಗಂಟೆಗಳ ಕಾಲ ಆದಿವಾಸಿಗಳ ಕುಂದುಕೊರತೆಗಳನ್ನ ಆಲಿಸಿದರು.