ಎಚ್.ಡಿ.ಕೋಟೆ:ಎಚ್ ಡಿ ಕೋಟೆ ತಾಲೂಕಿನಲ್ಲಿ ನೆನ್ನೆ ರಾತ್ರಿ ಇದ್ದಕ್ಕಿದ್ದಂತೆ ಭಾರಿ ಮಳೆ ಸುರಿಯುವುದರ ಜೊತೆಗೆ ಗುಡುಗು ಮಿಂಚು ಹಾಗೂ ಸಿಡಿಲಿನ ಆರ್ಭಟವು ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಕೋಟೆ ಪಟ್ಟಣದ ಪಕ್ಕದಲ್ಲಿರುವ ಬೆಳಗನಹಳ್ಳಿ ಗ್ರಾಮದ ಯೋಗೇಶ್ ಅವರ ಎರಡು ಹಸುಗಳಿಗೆ ಸಿಡಿಲೆರಗಿ ಸಾವನಪ್ಪಿರುವ ಘಟನೆ ನಡೆದಿದೆ.
ನೆನ್ನೆ ಸಂಜೆ ಹಸುಗಳನ್ನು ಮೇಯಿಸಿಕೊಂಡು ಬಂದು ಮನೆಯ ಮುಂದೆ ಮರಕ್ಕೆ ಕಟ್ಟುಹಾಕಲಾಗಿತ್ತು. ನಂತರ ಸುಮಾರು 10 ಗಂಟೆಯಲ್ಲಿ ಧಾರಕಾರವಾಗಿ ಸುರಿಯುತ್ತಿದ್ದ ಮಳೆಯ ನಡುವೆ ಸಿಡಿಲು ಹೊಡೆದು ಕಟ್ಟಿಹಾಕಿದ್ದ ಎರಡು ಹಸುಗಳು ದಾರುಣ ಸಾವನ್ನಪ್ಪಿದವು.ಇದರಿಂದ ರೈತ ಯೋಗೇಶ್ ದಿಕ್ಕುಕಾಣದಾಗಿ ಬದುಕಿಗೆ ಆಸರೆಯಾಗಿದ್ದ ಹಸುಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿದ ತಹಶಿಲ್ದಾರ ಸಣ್ಣರಾಮಪ್ಪ ರೈತನಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಸಿಗುವ ಪರಿಹಾರವನ್ನು ತಲಾ ಒಂದು ಹಸುವಿಗೆ 37.500ರೂ ಗಳನ್ನ ಎರಡು ದಿನದೊಳಗೆ ತಲುಪಿಸುತ್ತೆವೆ ಎಂದು ಭರವಸೆ ನೀಡಿದರು.