Friday, April 4, 2025
Google search engine

Homeರಾಜಕೀಯಎಚ್.ಡಿ.ಕುಮಾರಸ್ವಾಮಿ ಕಿಂಗ್ ಆಫ್ ಬ್ಲಾಕ್ ಮೇಲ್: ಡಿ.ಕೆ.ಶಿವಕುಮಾರ್

ಎಚ್.ಡಿ.ಕುಮಾರಸ್ವಾಮಿ ಕಿಂಗ್ ಆಫ್ ಬ್ಲಾಕ್ ಮೇಲ್: ಡಿ.ಕೆ.ಶಿವಕುಮಾರ್

ಚಿಕ್ಕಮಗಳೂರು: ಮುಗಿಸೋದೇ ಅಲ್ವಾ ಅವರ ಕೆಲಸ, ಅವರು ಕಿಂಗ್ ಆಫ್ ಬ್ಲಾಕ್ ಮೇಲ್ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್ ನಾಯಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಿಡಿ ಕಾರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಅಳಿಯ ಅಮರ್ಥ್ಯ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಮುಗಿದಿದ್ದು ಸಿದ್ದಾರ್ಥ್ ಮನೆಗೆ ರೆಸ್ಟ್ ಗೆ ಬಂದಿದ್ದೇನೆ ಎಂದರು.

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಎಲ್ಲ ವಿಚಾರ ಕುಮಾರಣ್ಣನಿಗೆ ಗೊತ್ತು. ಒಕ್ಕಲಿಗ ನಾಯಕರ ಪೈಪೋಟಿಯಂತೆ, ನನ್ನ ರಾಜೀನಾಮೆ ಬೇಕಂತೆ, ಕೊಡೋಣ ರಾಜೀನಾಮೆ. ಮುಗಿಸೋದೇ ಅಲ್ವಾ ಅವರ ಕೆಲಸ. ಕಿಂಗ್ ಆಫ್ ಬ್ಲಾಕ್ ಮೇಲ್ ಎಂದು ವ್ಯಂಗ್ಯವಾಗಿ ಆಕ್ರೋಶ ಹೊರ ಹಾಕಿದರು.

ಅಧಿಕಾರಿಗಳು, ರಾಜಕಾರಣಿಗಳಿಗೆ ಹೆದರಿಸುತ್ತಿದ್ದಾರೆ. ಅವರದು ಇದೇ ಕೆಲಸ. ಚರ್ಚೆ ಮಾಡಲು ಸಮಯವಿದೆ. ಅಸೆಂಬ್ಲಿ ಇದೆ ಎಲ್ಲಾ ತೆಗೆದುಕೊಂಡು ಬರಲಿ ಚರ್ಚೆ ಮಾಡೋಣ ಎಂದರು.

ದೇವೇಗೌಡರು ನನ್ನ ಹೆಸರು ತೆಗೆದುಕೊಳ್ಳುವುದು ಬೇಡ ಅಂದರು. ಅವರದ್ದೇ ಬೇರೆ ಫ್ಯಾಮಿಲಿ ನಮ್ಮದೇ ಬೇರೆ ಫ್ಯಾಮಿಲಿ ಎಂದಿದ್ದಾರೆ. ಉಪ್ಪು ತಿಂದವನು ನೀರು ಕುಡಿಬೇಕು ಎಂದವರು ಈಗ ಯಾಕೆ ಉರಿ ಮಾಡಿಕೊಳ್ಳುತ್ತಿದ್ದಾರೆ? ಇವರು ಲಾಯರ್ರಾ? ಜಡ್ಜಾ? ಹೋಗಿ ವಾದ ಮಾಡಲಿ ಎಂದರು.

 ಎಲ್ಲಾ ಗೊತ್ತಿದೆ, ಕಥಾ ನಾಯಕ, ಡೈರೆಕ್ಟರ್, ಪ್ರೋಡ್ಯೂಸರ್ ಎಲ್ಲವೂ ಇವರೇ. ನನ್ನ ಮೇಲೆ ಆರೋಪ ಮಾಡದಿದ್ದರೆ ಮಾರ್ಕೆಟ್ ಓಡಲ್ಲ, ನೀವು ತೋರಿಸುವುದಿಲ್ಲ. ನನ್ನ ಹೆಸರು ಇಲ್ಲದಿದ್ದರೆ ಪಾಪ ನಿದ್ದೆಯೇ ಬರುವುದಿಲ್ಲ ಎಂದು ತಿರುಗೇಟು ನೀಡಿದರು.

RELATED ARTICLES
- Advertisment -
Google search engine

Most Popular