ಚನ್ನಪಟ್ಟಣ : ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಫಲಿತಾಂಶ ಇದೀಗ ಹೊರ ಬಿದ್ದಿದ್ದು ಎನ್.ಡಿ.ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡಿದ್ದ, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಚುನಾವಣಾ ಅಧಿಕಾರಿಗಳಿಂದ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.
ಇದರ ಮಧ್ಯ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಪಿ ಯೋಗೇಶ್ವರ್ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಸ್ವಾರ್ಥ ಹಾಗೂ ಅಧಿಕಾರದ ದುರಾಸೆಗಾಗಿ ಮಗನನ್ನೇ ಬಲಿ ಕೊಟ್ಟರು ಎಂದು ತಿಳಿಸಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ನಾನು ಗೆಲುವನ್ನು ನಿರೀಕ್ಷೆ ಮಾಡಿದ್ದೆ. 30,000 ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಇದೆ ಅಂತ ಹೇಳಿದ್ದೆ. ಮಾಜಿ ಪ್ರಧಾನಿ ದೇವೇಗೌಡರು ಮೊಮ್ಮಗನನ್ನೇ ಪಣಕಿಟ್ಟಿದ್ದರು. ಇನ್ನು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ತಮ್ಮ ಮಗನ ಪಣಕ್ಕಿದ್ದರು. ಆದರೆ ಕುಮಾರಸ್ವಾಮಿ ಸ್ವಾರ್ಥ ದುರಾಸೆಗೆ ಮಗನನ್ನೇ ಬಲಿಕೊಟ್ಟಿದ್ದಾರೆ ಎಂದರು.
ಮಗನ ಭವಿಷ್ಯ ರೂಪಿಸ ಬೇಕಿದ್ದರೆ ಮಂಡ್ಯದಿಂದ ನಿಲ್ಲಿಸಿ ಗೆಲ್ಲಿಸಬಹುದಿತ್ತು. ಆದರೆ ಕುಮಾರಸ್ವಾಮಿ ಸ್ವಾರ್ಥ ದುರಾಸೆಗೆ ಮಗನನ್ನೇ ಬಲಿ ಕೊಟ್ಟಿದ್ದಾರೆ. ನಿಖಿಲ್ ಸೋಲುವ ಮೂಲಕ ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಜನರು ತಿರಸ್ಕರಿಸಿದ್ದಾರೆ. ಮೊಮ್ಮಗನನ್ನು ಗೆಲ್ಲಿಸುವ ಸ್ವಾರ್ಥವಿತ್ತು ಅದಕ್ಕೆ ಜನ ಮನ್ನಣೆ ನೀಡಿಲ್ಲ. ಉಪಚುನಾವಣೆಯಲ್ಲಿ ವಿಜಯೇಂದ್ರ ಬ್ಯಾಟರಿ ವೀಕ್ ಅಂತ ಹೇಳಿದ್ದರು. ರೀ ವಿಜಯೇಂದ್ರ ಅವರೇ ನಿಮ್ಮ ಬ್ಯಾಟರಿ ವೀಕ್ ಆದಾಗ ಚಾರ್ಜ್ ಮಾಡಿದ್ದು ನಾನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಗೆ ಸಿಪಿ ಯೋಗೇಶ್ವರ್ ಟಾಂಗ್ ನೀಡಿದರು.