ಕೆ.ಆರ್.ನಗರ: ಪಟ್ಟಣದ ವಿಶ್ವಕರ್ಮ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ಡಿ.ಯೋಗೇಶ್, ಉಪಾಧ್ಯಕ್ಷರಾಗಿ ಕೆ.ಎನ್.ತುಳಸೀಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಛೇರಿ ಆವರಣದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸಂಬಂಧ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಡಿ.ಯೋಗೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಎನ್.ತುಳಸೀಕುಮಾರ್ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಸಹಕಾರ ಇಲಾಖೆಯ ಎಂ.ಎನ್. ಸೋಮಶೇಖರ್ ಇಬ್ಬರ ಆಯ್ಕೆಯನ್ನು ಪ್ರಕಟಿಸಿದರು.
ಕಳೆದ ಬುಧವಾರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ೧೨ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಿಗದಿಪಡಿಸಲಾಗಿತ್ತು.
ನಿರ್ದೇಶಕರುಗಳಾಗಿ ಬಸವರಾಜು ಕೆ.ಪಿ., ವಿನಯ್‌ಕುಮಾರ, ಅವಿನಾಶ್ ಎಸ್.ಪಿ., ಮೌನೇಶ್ವರ ಎಸ್., ನವೀನ ಎಸ್., ಶಿವಪ್ಪ ಗಿರೀಶಕುಮಾರ್ ಕೆ.ಸಿ., ಲೋಕೇಶಚಾರ್, ಸವಿತ ಟಿ.ಎಂ., ಶೋಭ ಎಂ. ಆಯ್ಕೆಯಾದರು. ಸಿಬ್ಬಂದಿ ಕುಸುಮ ಹಾಜರಿದ್ದರು.