ಮಂಡ್ಯ: ಉಪಮುಖ್ಯಮಂತ್ರಿ ಡಿಕೆಶಿ ಮತ್ತೆ ತಿವಾರಿ ಜೈಲಿಗೆ ಹೋಗ್ತಾರೆ ಕನಕಪುರದಲ್ಲಿ ಉಪಚುನಾವಣೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಪಕ್ಷ ಹಿನ್ನಡೆ, ಪುತ್ರನ ಸೋಲಿನಿಂದ ಹೆಚ್ಡಿಕೆ ಮಾನಸಿಕವಾಗಿ ಕುಗ್ಗಿದ್ದಾರೆ ಎಂದಿದ್ದಾರೆ.
ಹೆಚ್. ಡಿ ಕುಮಾರಸ್ವಾಮಿರವರು ಜೆಡಿಎಸ್ ಪಕ್ಷದ ಹಿನ್ನಡೆ ಹಾಗೂ ಅವರ ಪುತ್ರ ನಿಖಿಲ್ ಸೋಲಿನಿಂದ ಮಾನಸಿಕವಾಗಿ ಕುಗ್ಗಿದ್ದಾರೆ. ಮನಸ್ಸಿನ ಸ್ಥಿಮೀತತೆಯನ್ನು ಹೆಚ್ ಡಿಕೆ ಕಳೆದುಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಕೋಮುವಾದ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಹೆಚ್ಡಿಕೆ, ದ್ವೇಷದ ರಾಜಕಾರಣವನ್ನು ಮಾಡುತ್ತಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನವನ್ನು ಹೊಂದಿತ್ತು. ಆದರೂ ಸಹ ಯಾವುದೇ ಷರತ್ತಿಲ್ಲದೇ ಮುಖ್ಯಮಂತ್ರಿ ಸ್ಥಾನವನ್ನು ನೀಡಿದ್ದರು. ಅದನ್ನು ಉಳಿಸಿಕೊಳ್ಳದೇ ಅಧಿಕಾರವನ್ನು ಕಳೆದುಕೊಂಡರು. ಡಿ.ಕೆ ಶಿವಕುಮಾರ್‌ರವರು ಉಪಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿರುವುದನ್ನು ಸಹಿಸದೇ. ಈ ರೀತಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮತ್ತೋದೆಡೆ ಒಕ್ಕಲಿಗ ಸಮುದಾಯ ದಲ್ಲಿ ನಾವೇ ಸಾರ್ವಭೌಮರು ಎನ್ನುವಂತಹ ಸಂದರ್ಭದಲ್ಲಿ, ಡಿ.ಕೆ.ಶಿವಕುಮಾರ್ ರವರಿಗೆ ಇರುವ ಒಕ್ಕಲಿಗರ ಬೆಂಬಲವನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ರೀತಿಯ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದು ಹರಿಹಾಯ್ದಿದ್ದಾರೆ.