Friday, April 18, 2025
Google search engine

Homeಅಪರಾಧಪ್ರೇಯಸಿಯೊಂದಿಗೆ ಹೆಡ್ ಕಾನ್‌ಸ್ಟೇಬಲ್‌ ಲವ್ವಿ-ಡವ್ವಿ; ರೆಡ್‌ಹ್ಯಾಂಡಾಗಿ ಹಿಡಿದ ಪತ್ನಿ

ಪ್ರೇಯಸಿಯೊಂದಿಗೆ ಹೆಡ್ ಕಾನ್‌ಸ್ಟೇಬಲ್‌ ಲವ್ವಿ-ಡವ್ವಿ; ರೆಡ್‌ಹ್ಯಾಂಡಾಗಿ ಹಿಡಿದ ಪತ್ನಿ

ರಾಯಚೂರು: ಜಿಲ್ಲೆಯ ಸಿರವಾರದಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ ಒಬ್ಬರು ಪ್ರೇಯಸಿಯೊಂದಿಗೆ ಇದ್ದಾಗಲೇ ರೆಡ್‌ಹ್ಯಾಂಡಾಗಿ ಪತ್ನಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಪತ್ನಿಗೆ ಕೈಕೊಟ್ಟು ಪ್ರೇಯಸಿಯೊಂದಿಗೆ ವಾಸಿಸುತ್ತಿದ್ದ ಹೆಡ್ ಕಾನ್‌ಸ್ಟೇಬಲ್‌ ರಾಜ್ ಮಹಮ್ಮದ್ ಸಿಕ್ಕಿಬಿದ್ದಿದ್ದಾನೆ.

ಸಿರವಾರ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಆಗಿರುವ ರಾಜ್ ಮಹಮ್ಮದ್ ಸಿರವಾರದಲ್ಲಿ ಪ್ರೇಯಸಿಗಾಗಿ ಮನೆ ಮಾಡಿದ್ದ. ದೇವದುರ್ಗ ಠಾಣೆ ಪೊಲೀಸ್ ಕಾನ್‌ಸ್ಟೇಬಲ್‌ ಆಗಿರುವ ಪತ್ನಿ ಪ್ಯಾರಿ ಬೇಗಂ ಅವರನ್ನ ಪ್ರೀತಿಸಿ ಮದುವೆಯಾಗಿದ್ದ ರಾಜ್ ಮಹಮ್ಮದ್ ಕಳೆದ ನಾಲ್ಕು ವರ್ಷಗಳಿಂದ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದ. ಪೊಲೀಸ್ ಹಿರಿಯ ಅಧಿಕಾರಿಗಳು ಬುದ್ದಿವಾದ ಹೇಳಿದರೂ ತಿದ್ದಿಕೊಂಡಿರಲಿಲ್ಲ.

ಗಂಡ ಮತ್ತು ಆತನ ಪ್ರೇಯಸಿಯನ್ನು ಮನೆಯಲ್ಲಿ ಲಾಕ್ ಮಾಡಿದ ಮಹಿಳಾ ಪೇದೆ ಪ್ಯಾರಿ ಬೇಗಂ ಸ್ಥಳದಲ್ಲೇ ಎಸ್ಪಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ಎಸ್ಪಿ ಸೂಚನೆಯ ಮೇರೆಗೆ ಸ್ಥಳಕ್ಕೆ ಬಂದ ಸಿರವಾರ ಠಾಣೆ ಪಿಎಸ್ಐ ಗುರುಚಂದ್ರ ಯಾದವ್ ಮನೆ ಬೀಗ ಓಪನ್ ಮಾಡಿಸಿ ಇಬ್ಬರನ್ನೂ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪತಿಯ ಕಳ್ಳಾಟಕ್ಕೆ ಬೇಸತ್ತ ಮಹಿಳಾ ಪೇದೆ ನನಗೆ ನ್ಯಾಯ ಬೇಕು ಅಂತಾ ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular